ADVERTISEMENT

ಅಭಿಮಾನಿಗಳ ನೀರಸ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2011, 19:30 IST
Last Updated 14 ಮಾರ್ಚ್ 2011, 19:30 IST


ಕೋಲ್ಕತ್ತ (ಪಿಟಿಐ): ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಪ್ರಸಕ್ತ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯ ಮಂಗಳವಾರ ನಡೆಯಲಿದೆ. ಆದರೆ ಇಲ್ಲಿನ ಕ್ರಿಕೆಟ್ ಪ್ರೇಮಿಗಳು ಈ ಪಂದ್ಯದತ್ತ ಹೆಚ್ಚಿನ ಆಸಕ್ತಿ ತೋರಿಲ್ಲ. ಭಾರತ- ಇಂಗ್ಲೆಂಡ್ ನಡುವಿನ ಪಂದ್ಯಕ್ಕೆ ಆತಿಥ್ಯ ವಹಿಸುವ ಅವಕಾಶ ಕೋಲ್ಕತ್ತಕ್ಕೆ ತಪ್ಪಿಹೋಗಿತ್ತು. ಇದೀಗ ದಕ್ಷಿಣ ಆಫ್ರಿಕಾ- ಐರ್ಲೆಂಡ್ (ಮಾ. 15), ಐರ್ಲೆಂಡ್- ಹಾಲೆಂಡ್ (ಮಾ. 18) ಮತ್ತು ಜಿಂಬಾಬ್ವೆ- ಕೀನ್ಯಾ (ಮಾ.20) ತಂಡಗಳ ನಡುವಿನ ಪಂದ್ಯ ಇಲ್ಲಿ ನಡೆಯಲಿವೆ.

ಇದುವರೆಗೆ ಮೂರು ಪಂದ್ಯಗಳಿಗೆ ಒಟ್ಟಾರೆ 2,400 ಟಿಕೆಟ್‌ಗಳು ಮಾತ್ರ ಮಾರಾಟವಾಗಿವೆ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ‘ಇದುವರೆಗೆ ಒಟ್ಟು 24 ಲಕ್ಷ 89 ಸಾವಿರ ರೂ. ಮೊತ್ತದ ಟಿಕೆಟ್‌ಗಳು ಮಾತ್ರ ಮಾರಾಟವಾಗಿವೆ’ ಎಂದು ಸಿಎಬಿ ಖಜಾಂಚಿ ಸುಬಿರ್ ಗಂಗೂಲಿ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.