ADVERTISEMENT

ಅಲೆಕ್ಸಾಂಡರ್‌ ಜ್ವೆರೆವ್‌ಗೆ ‍ಪ್ರಶಸ್ತಿ

ಏಜೆನ್ಸೀಸ್
Published 14 ಮೇ 2018, 19:30 IST
Last Updated 14 ಮೇ 2018, 19:30 IST
ಪ್ರಶಸ್ತಿಯೊಂದಿಗೆ ಅಲೆಕ್ಸಾಂಡರ್‌ ಜ್ವೆರೆವ್‌ –ರಾಯಿಟರ್ಸ್‌ ಚಿತ್ರ
ಪ್ರಶಸ್ತಿಯೊಂದಿಗೆ ಅಲೆಕ್ಸಾಂಡರ್‌ ಜ್ವೆರೆವ್‌ –ರಾಯಿಟರ್ಸ್‌ ಚಿತ್ರ   

ಮ್ಯಾಡ್ರಿಡ್‌ : ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಅವರು ಮ್ಯಾಡ್ರಿಡ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಜ್ವೆರೆವ್‌ 6–4, 6–4ರ ನೇರ ಸೆಟ್‌ಗಳಿಂದ ಡಾಮಿನಿಕ್‌ ಥೀಮ್‌ ಅವರನ್ನು ಸೋಲಿಸಿದರು.

ಕ್ವಾರ್ಟರ್‌ ‍ಫೈನಲ್‌ನಲ್ಲಿ ಸ್ಪೇನ್‌ನ ರಫೆಲ್‌ ನಡಾಲ್‌ಗೆ ಆಘಾತ ನೀಡಿದ್ದ ಜ್ವೆರೆವ್, ಪ್ರಶಸ್ತಿ ಸುತ್ತಿನ ಹೋರಾಟದ ಮೊದಲ ಸೆಟ್‌ನಲ್ಲಿ ಮಿಂಚಿನ ಆಟ ಆಡಿ 2–0ರ ಮುನ್ನಡೆ ಗಳಿಸಿದರು. ನಂತರ ಛಲದಿಂದ ಹೋರಾಡಿದ ಥೀಮ್‌ ಹಿನ್ನಡೆಯನ್ನು 4–5ಕ್ಕೆ ತಗ್ಗಿಸಿಕೊಂಡರು. 10ನೇ ಗೇಮ್‌ನಲ್ಲಿ ಸರ್ವ್‌ ಕಾಪಾಡಿಕೊಂಡ ಜ್ವೆರೆವ್‌ ಸೆಟ್‌ ತಮ್ಮದಾಗಿಸಿಕೊಂಡರು.

ADVERTISEMENT

ಎರಡನೇ ಸೆಟ್‌ನಲ್ಲೂ ಜ್ವೆರೆವ್‌ ಅಬ್ಬರಿಸಿದರು. ಮೊದಲ ಮೂರು ಗೇಮ್‌ಗಳಲ್ಲಿ ಪ್ರಾಬಲ್ಯ ಮೆರೆದ ಅವರು 3–0ರ ಮುನ್ನಡೆ ಗಳಿಸಿದರು. ನಂತರ ಥೀಮ್‌ ತಿರುಗೇಟು ನೀಡಿ ಹಿನ್ನಡೆ ತಗ್ಗಿಸಿಕೊಂಡರು. ಇದರಿಂದ ವಿಚಲಿತರಾಗದ ಜ್ವೆರೆವ್‌, ಕ್ರಾಸ್‌ಕೋರ್ಟ್‌ ಮತ್ತು ಬೇಸ್‌ಲೈನ್‌ ಹೊಡೆತಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.