ADVERTISEMENT

ಅಲ್ಟಿಬಾಕ್ಸ್‌ ನಾರ್ವೆ ಚೆಸ್‌: ಡ್ರಾ ಪಂದ್ಯದಲ್ಲಿ ಆನಂದ್‌

ಪಿಟಿಐ
Published 29 ಮೇ 2018, 19:30 IST
Last Updated 29 ಮೇ 2018, 19:30 IST
ವಿಶ್ವನಾಥನ್‌ ಆನಂದ್‌ (ಸಂಗ್ರಹ ಚಿತ್ರ)
ವಿಶ್ವನಾಥನ್‌ ಆನಂದ್‌ (ಸಂಗ್ರಹ ಚಿತ್ರ)   

ಸ್ಟಾವೆಂಜರ್‌, ನಾರ್ವೆ: ಭಾರತದ ಗ್ರ್ಯಾಂಡ್‌ ಮಾಸ್ಟರ್‌ ವಿಶ್ವನಾಥನ್‌ ಆನಂದ್‌ ಅವರು ಅಲ್ಟಿಬಾಕ್ಸ್‌ ನಾರ್ವೆ ಚೆಸ್‌ ಟೂರ್ನಿಯ ಆರಂಭಿಕ ಸುತ್ತಿನಲ್ಲಿ ಡ್ರಾ ಮಾಡಿಕೊಂಡಿದ್ದಾರೆ.

ಸೋಮವಾರ ನಡೆದ ಹಣಾಹಣಿ ಯಲ್ಲಿ ಆನಂದ್‌, ಅರ್ಮೇ ನಿಯಾದ ಲೆವೊನ್‌ ಅರೋನಿಯನ್‌ ವಿರುದ್ಧ ಪಾಯಿಂಟ್ ಹಂಚಿಕೊಂಡರು.

ಇತ್ತೀಚೆಗೆ ನಡೆದಿದ್ದ ಬ್ಲಿಟ್ಜ್‌ ಟೂರ್ನಿಯಲ್ಲಿ ಎರಡನೇ ಸ್ಥಾನ ಗಳಿಸಿ ಗಮನ ಸೆಳೆದಿದ್ದ ಆನಂದ್‌, ಆರನೇ ನಡೆಯವರೆಗೂ ಚುರುಕಾಗಿ ಕಾಯಿಗಳನ್ನು ಮುನ್ನಡೆಸಿ ಎದುರಾಳಿಯ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಸಿದರು. ಭಾರತದ ಆಟಗಾರನ ತಂತ್ರಕ್ಕೆ ಪ್ರತಿತಂತ್ರ ಹೆಣೆದ ಅರೋನಿಯನ್‌ ಎಚ್ಚರಿಕೆಯಿಂದ ಆಡಿ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.

ADVERTISEMENT

ಕಾರ್ಲ್‌ಸನ್‌ಗೆ ಜಯ: ನಾರ್ವೆಯ ಆಟ ಗಾರ ಮ್ಯಾಗ್ನಸ್‌ ಕಾರ್ಲ್‌ಸನ್‌ ಮೊದಲ ಸುತ್ತಿನಲ್ಲಿ ಅಮೆರಿಕದ ಫಾಬಿಯಾನೊ ಕರುವಾನ ವಿರುದ್ಧ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.