
ಪ್ರಜಾವಾಣಿ ವಾರ್ತೆಚೆನ್ನೈ (ಪಿಟಿಐ): ಐದನೇ ಬಾರಿಗೆ ವಿಶ್ವ ಚೆಸ್ ಚಾಂಪಿಯನ್ ಆಗಿರುವ ವಿಶ್ವನಾಥನ್ ಆನಂದ್‌ಗೆ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಬುಧವಾರ ಎರಡು ಕೋಟಿ ರೂಪಾಯಿ ಮೊತ್ತದ ಚೆಕ್ ನೀಡಿದರು.
ಪತ್ನಿ ಅರುಣಾ ಜೊತೆಗೆ ಗ್ರ್ಯಾಂಡ್‌ಮಾಸ್ಟರ್ ಆನಂದ್ ಅವರು ರಾಜ್ಯ ಸಚಿವಾಲಯದಲ್ಲಿ ಜಯಲಲಿತಾ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಚೆಕ್ ಹಸ್ತಾಂತರಿಸಲಾಯಿತು.`ರಾಜ್ಯಕ್ಕೆ ಹಾಗೂ ದೇಶಕ್ಕೆ ನೀವು ಹೆಮ್ಮೆ ತಂದಿದ್ದೀರಿ~ ಎಂದು ಆನಂದ್ ಸಾಧನೆಯನ್ನು ತಮಿಳುನಾಡು ಮುಖ್ಯಮಂತ್ರಿ ಕೊಂಡಾಡಿದರು.
`ತಮಿಳುನಾಡು ಸರ್ಕಾರವು ಚೆಸ್ ಕ್ರೀಡೆಯನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಶಾಲಾ ಮಕ್ಕಳಲ್ಲಿ ಈ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ಕೂಡ ಮಾಡುತ್ತಿದೆ~ ಎಂದು ಆನಂದ್ ಮೆಚ್ಚುಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.