ADVERTISEMENT

ಆಸ್ಟ್ರೇಲಿಯಾ ತಂಡಕ್ಕೆ ಗೆಲುವು

ಕ್ರಿಕೆಟ್‌: ಆ್ಯರನ್‌ ಫಿಂಚ್‌ ಶತಕ; ಇಂಗ್ಲೆಂಡ್‌ಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2014, 19:30 IST
Last Updated 12 ಜನವರಿ 2014, 19:30 IST
ಇಂಗ್ಲೆಂಡ್‌ ವಿರುದ್ಧದ ಮೊದಲ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಶತಕ ಗಳಿಸಿದ ಆಸ್ಟ್ರೇಲಿಯಾದ ಆ್ಯರನ್‌ ಫಿಂಚ್‌ ಸಂಭ್ರಮಿಸಿದರು 	–ಎಎಫ್‌ಪಿ ಚಿತ್ರ
ಇಂಗ್ಲೆಂಡ್‌ ವಿರುದ್ಧದ ಮೊದಲ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಶತಕ ಗಳಿಸಿದ ಆಸ್ಟ್ರೇಲಿಯಾದ ಆ್ಯರನ್‌ ಫಿಂಚ್‌ ಸಂಭ್ರಮಿಸಿದರು –ಎಎಫ್‌ಪಿ ಚಿತ್ರ   

ಮೆಲ್ಬರ್ನ್‌ (ರಾಯಿಟರ್ಸ್‌): ಆಸ್ಟ್ರೇಲಿಯಾ ತಂಡದವರು ಇಂಗ್ಲೆಂಡ್‌ ವಿರುದ್ಧದ ತಮ್ಮ ಪ್ರಭುತ್ವವನ್ನು ಏಕದಿನ ಪಂದ್ಯದಲ್ಲೂ ಮುಂದುವರಿಸಿದ್ದಾರೆ.

ಮೆಲ್ಬರ್ನ್‌ನಲ್ಲಿ ಭಾನುವಾರ ನಡೆದ ಮೊದಲ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಮೈಕಲ್ ಕ್ಲಾರ್ಕ್‌ ಬಳಗ ಆರು ವಿಕೆ ಟ್‌ಗಳ ಗೆಲುವು ಪಡೆಯಿತು. ಆಕರ್ಷಕ ಶತಕ ಗಳಿಸಿದ ಆ್ಯರನ್‌ ಫಿಂಚ್‌ (121, 128 ಎಸೆತ, 12 ಬೌಂ) ಆಸೀಸ್‌ ಗೆಲು ವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ 7 ವಿಕೆಟ್‌ಗೆ 269 ರನ್‌ ಪೇರಿಸಿತು. ಗ್ಯಾರಿ ಬಾಲೆನ್ಸ್‌ (79) ಮತ್ತು ಎಯೊನ್‌ ಮಾರ್ಗನ್‌ (50) ಅವರ ಅರ್ಧಶತಕ ಪ್ರವಾಸಿ ತಂಡದ ಸಾಧಾರಣ ಮೊತ್ತಕ್ಕೆ ಕಾರಣ.

ಆತಿಥೇಯ ತಂಡ 45.4 ಓವರ್‌ಗಳಲ್ಲಿ 4 ವಿಕೆಟ್‌ಗೆ 270 ರನ್‌ ಗಳಿಸಿ ಜಯ ಸಾಧಿಸಿತು. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 1-0 ರ ಮುನ್ನಡೆ ಪಡೆಯಿತು. ಫಿಂಚ್‌ ಮತ್ತು ಡೇವಿಡ್‌ ವಾರ್ನರ್‌ (65) ಮೊದಲ ವಿಕೆಟ್‌ಗೆ 163 ರನ್‌ ಸೇರಿಸಿ ಆಸೀಸ್‌ ಗೆಲುವಿನ ಹಾದಿ ಸುಗಮಗೊಳಿಸಿದರು. ಇತ್ತೀಚೆಗೆ ಕೊನೆಗೊಂಡ ಆ್ಯಷಸ್‌ ಟೆಸ್ಟ್‌ ಸರಣಿಯಲ್ಲಿ ಅಲಸ್ಟೇರ್‌ ಕುಕ್‌ ನೇತೃತ್ವದ ಇಂಗ್ಲೆಂಡ್‌ 0-5 ರಲ್ಲಿ ಮುಖಭಂಗ ಅನುಭವಿಸಿತ್ತು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 269 (ಇಯಾನ್‌ ಬೆಲ್‌ 41, ಗ್ಯಾರಿ ಬಾಲೆನ್ಸ್‌ 79, ಎಯೊನ್‌ ಮಾರ್ಗನ್‌ 50, ಜಾಸ್‌ ಬಟ್ಲರ್‌ ಔಟಾಗದೆ 34, ಕ್ಲಿಂಟ್‌ ಮೆಕೇ 44ಕ್ಕೆ 3, ಕ್ಸೇವಿಯರ್‌ ಡೋಹರ್ತಿ 29ಕ್ಕೆ 1)
ಆಸ್ಟ್ರೇಲಿಯಾ: 45.4 ಓವರ್‌ಗಳಲ್ಲಿ 4 ವಿಕೆಟ್‌ಗೆ 270 (ಆ್ಯರನ್‌ ಫಿಂಚ್‌ 121, ಡೇವಿಡ್‌ ವಾರ್ನರ್‌ 65, ಮೈಕಲ್‌ ಕ್ಲಾರ್ಕ್‌ 43, ಕ್ರಿಸ್‌ ಜೋರ್ಡಾನ್‌ 50ಕ್ಕೆ 1) ಫಲಿತಾಂಶ: ಆಸ್ಟ್ರೇಲಿಯಾಕ್ಕೆ 6 ವಿಕೆಟ್‌ ಗೆಲುವು ಹಾಗೂ ಸರಣಿಯಲ್ಲಿ 1-0 ಮುನ್ನಡೆ, ಪಂದ್ಯಶ್ರೇಷ್ಠ: ಆ್ಯರನ್ ಫಿಂಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.