ADVERTISEMENT

ಆಸ್ಟ್ರೇಲಿಯಾ ತಂಡ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2012, 19:30 IST
Last Updated 8 ಮಾರ್ಚ್ 2012, 19:30 IST

ಅಡಿಲೇಡ್: ಶ್ರೀಲಂಕಾ ಎದುರಿದ್ದ ಗುರಿ ಸವಾಲಿನದ್ದೇನು ಆಗಿರಲಿಲ್ಲ. ಆದರೆ ಆಸ್ಟ್ರೇಲಿಯಾದ ಬಲಗೈ ವೇಗಿ ಕ್ಲಿಂಟ್ ಮೆಕ್‌ಕೀ ದಾಳಿಯು ದೊಡ್ಡದಲ್ಲದ ರನ್ ಮೊತ್ತವೂ ಸಿಂಹಳೀಯರಿಗೆ ಕಷ್ಟದ್ದಾಗಿ ಕಾಣುವಂತೆ ಮಾಡಿದರು. ಅದೇ ಕಾಂಗರೂಗಳ ನಾಡಿನ ಪಡೆಯು ಚಾಂಪಿಯನ್ ಪಟ್ಟ ಪಡೆಯಲು ಕಾರಣವೂ ಆಯಿತು.

ಆರಂಭದಲ್ಲಿಯೇ ಲಂಕಾ ತಂಡದ ಹಾದಿಯಲ್ಲಿ ಕಲ್ಲು-ಮುಳ್ಳು ಸುರಿದಿದ್ದ ಕ್ಲಿಂಟ್ ಮೂರು ಪಂದ್ಯಗಳ ಫೈನಲ್‌ನ ಕೊನೆಯ ಹಣಾಹಣಿಯ ಮಹತ್ವದ ಘಟ್ಟದಲ್ಲಿಯೂ ತಮ್ಮ ಮೊನಚಿನ ಬೌಲಿಂಗ್‌ನಿಂದ ಮಿಂಚಿದರು. `ಪಂದ್ಯ ಶ್ರೇಷ್ಠ~ ಗೌರವಕ್ಕೆ ಪಾತ್ರರಾದ ಅವರು ಐದು ವಿಕೆಟ್ ಪಡೆದಿದ್ದೇ ಅಂತಿಮ ಹೋರಾಟದಲ್ಲಿನ ನಿರ್ಣಾಯಕ ಅಂಶ. 

ಅದರಲ್ಲಿಯೂ ತಮ್ಮ ಕೊನೆ ಸ್ಪೆಲ್‌ನಲ್ಲಿ ರಂಗನ ಹೆರಾತ್ ಹಾಗೂ ಲಸಿತ್ ಮಾಲಿಂಗ ವಿಕೆಟ್ ಕೆಡವಿದ್ದು ಆಸ್ಟ್ರೇಲಿಯಾ 16 ರನ್‌ಗಳ ಗೆಲವಿನ ಸಂಭ್ರಮ ಪಡೆಯಲು ಸಹಕಾರಿ.ಮಾಹೇಲ ಜಯವರ್ಧನೆ ನಾಯಕತ್ವದ ತಂಡವು ಜಯ ಸಾಧಿಸುವುದು ಅಸಾಧ್ಯವೇನು ಆಗಿರಲಿಲ್ಲ. ಆಕ್ರಮಣಕಾರಿ ಬ್ಯಾಟಿಂಗ್ ಕೂಡ ಮಾಡಬಲ್ಲ ಬೌಲರ್ ಮಾಲಿಂಗ ಒಂದೆರಡು ಬಿರುಸಿನ ಹೊಡೆತಗಳನ್ನು ಪ್ರಯೋಗಿಸಿದ್ದರೆ ಪಂದ್ಯವು ಖಂಡಿತ ತಿರುವು ಪಡೆಯುತಿತ್ತು. ಆದರೆ ಹಾಗೆ ಆಗಲು ಕ್ಲಿಂಟ್ ಅವಕಾಶ ನೀಡಲಿಲ್ಲ.

ಎರಡನೇ ಫೈನಲ್ ಪಂದ್ಯದಲ್ಲಿ ಗುರಿಯನ್ನು ಬೆನ್ನಟ್ಟಿ ಎಂಟು ವಿಕೆಟ್‌ಗಳ ಅಂತರದಿಂದ ನಿರಾಯಾಸವಾಗಿ ಜಯಿಸಿದ್ದ ಲಂಕಾ ಈ ಹಣಾಹಣಿಯಲ್ಲಿಯೂ ಹಾಗೆಯೇ ಮಾಡಬೇಕೆನ್ನುವ ಯೋಜನೆ ಹೊಂದಿತ್ತು. ಆದ್ದರಿಂದಲೇ `ಟಾಸ್~ ಗೆದ್ದು ಕ್ಷೇತ್ರರಕ್ಷಣೆ ಮಾಡಲು ನಾಯಕ ಮಾಹೇಲ ಜಯವರ್ಧನೆ ನಿರ್ಧರಿಸಿದರು. ಆದರೆ ಮಂಗಳವಾರದ ಲೆಕ್ಕಾಚಾರ ಗುರುವಾರಕ್ಕೆ ಸರಿ ಹೋಗಲಿಲ್ಲ!

ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 49.3 ಓವರುಗಳಲ್ಲಿ 231 ರನ್ ಗಳಿಸಿ ಆಲ್‌ಔಟ್ ಆಯಿತು. ಇಲ್ಲಿನ ಅಂಗಳದಲ್ಲಿ ಇದು ಸವಾಲಿನ ಮೊತ್ತವೇನು ಆಗಿರಲಿಲ್ಲ. ಎರಡನೇ ಪಂದ್ಯದಲ್ಲಿನಂತೆಯೇ ರನ್ ಗತಿಗೆ ಲಂಕಾ ಚುರುಕು ನೀಡಿದ್ದರೆ ಎಲ್ಲವೂ ಮಾಹೇಲ ಬಯಸಿದಂತೆಯೇ ನಡೆಯುತಿತ್ತು.

ಆದರೆ ಜಯದ ನಿರೀಕ್ಷೆಯೊಂದಿಗೆ ಹೋರಾಡುವಾಗ ವಿಕೆಟ್ ಕಾಯ್ದುಕೊಳ್ಳುವಲ್ಲಿ ಸಿಂಹಳೀಯರು ಯಶಸ್ವಿಯಾಗಲಿಲ್ಲ. ಆದ್ದರಿಂದ 48.5 ಓವರುಗಳಲ್ಲಿ 215 ರನ್‌ಗೆ ಗಂಟು-ಮೂಟೆ ಕಟ್ಟಿತು ಲಂಕಾ.
ಅದೇ ಆತಿಥೇಯರಿಗೆ ದೊಡ್ಡ ಸಂತಸ. ತಾಯ್ನಾಡಿನಲ್ಲಿ ಸರಣಿ ಸೋಲಿನ ಆಘಾತ ತಪ್ಪಿದ ಸಮಾಧಾನ. ಮೂರು ಪಂದ್ಯಗಳ ಫೈನಲ್‌ನಲ್ಲಿ 2-1ರಲ್ಲಿ ವಿಜಯಿ ಎನಿಸಿಕೊಂಡ ಸಂಭ್ರಮ. 

ಸ್ಕೋರ್ ವಿವರ

ಆಸ್ಟ್ರೇಲಿಯಾ: 49.3 ಓವರುಗಳಲ್ಲಿ 231

ಮ್ಯಾಥ್ಯೂ ವೇಡ್ ಸಿ ಕುಮಾರ ಸಂಗಕ್ಕಾರ ಬಿ ರಂಗನ ಹೆರಾತ್  49
ಡೇವಿಡ್ ವಾರ್ನರ್ ಸಿ ಕುಮಾರ ಸಂಗಕ್ಕಾರ ಬಿ ಫರ್ವೀಜ್ ಮಹಾರೂಫ್  48
ಶೇನ್ ವ್ಯಾಟ್ಸನ್ ಸಿ ರಂಗನ ಹೆರಾತ್ ಬಿ ತಿಲಕರತ್ನೆ ದಿಲ್ಶಾನ್  19
ಮೈಕಲ್ ಹಸ್ಸಿ ರನ್‌ಔಟ್ (ತಿಲಕರತ್ನೆ ದಿಲ್ಶಾನ್)  01

ಎಲ್‌ಬಿಡಬ್ಲ್ಯು ಬಿ ಫರ್ವೀಜ್ ಮಹಾರೂಫ್  19
ಪೀಟರ್ ಫಾರೆಸ್ಟ್ ಬಿ ರಂಗನ ಹೆರಾತ್  03
ಡೇನಿಯಲ್ ಕ್ರಿಸ್ಟೀನ್ ಸಿ ಜಯವರ್ಧನೆ ಬಿ ಮಹಾರೂಫ್  19
ಬ್ರೆಟ್ ಲೀ ಬಿ ನುವಾನ್ ಕುಲಶೇಖರ  32
ಕ್ಲಿಂಟ್ ಮೆಕ್‌ಕೀ ಸಿ ಫರ್ವೀಜ್ ಮಹಾರೂಫ್ ಬಿ ರಂಗನ ಹೆರಾತ್ 28
ಕ್ಸೇವಿಯರ್ ಡೋಹರ್ಟಿ ಔಟಾಗದೆ  05
ಲಿಯಾನ್ ಸಿ ಸೇನನಾಯಕೆ (ಬದಲಿ ಆಟಗಾರ) ಬಿ ಕುಲಶೇಖರ  00
ಇತರೆ: (ಬೈ-2, ಲೆಗ್‌ಬೈ-3, ವೈಡ್-3)  08

ವಿಕೆಟ್ ಪತನ: 1-75 (ಡೇವಿಡ್ ವಾರ್ನರ್; 13.6), 2-115 (ಶೇನ್ ವ್ಯಾಟ್ಸನ್; 20.4), 3-119 (ಮೈಕಲ್ ಹಸ್ಸಿ; 21.6), 4-123 (ಮ್ಯಾಥ್ಯೂ ವೇಡ್; 24.1), 5-135 (ಪೀಟರ್ ಫಾರೆಸ್ಟ್; 26.4), 6-151 (ಡೇವಿಡ್ ಹಸ್ಸಿ; 31.6), 7-177 (ಡೇನಿಯಲ್ ಕ್ರಿಸ್ಟೀನ್; 37.3), 8-217 (ಕ್ಲಿಂಟ್ ಮೆಕ್‌ಕೀ; 45.5), 9-231 (ಬ್ರೆಟ್ ಲೀ; 49.2), 10-231 (ನಥಾನ್ ಲಿಯಾನ್; 49.3).
ಬೌಲಿಂಗ್: ತಿಲಕರತ್ನೆ ದಿಲ್ಶಾನ್ 10-1-41-1 (ವೈಡ್-1), ನುವಾನ್ ಕುಲಶೇಖರ 9.3-0-40-2 (ವೈಡ್-1), ಲಸಿತ್ ಮಾಲಿಂಗ 10-0-69-0 (ವೈಡ್-1), ಫರ್ವೀಜ್ ಮಹಾರೂಫ್ 10-0-40-3, ರಂಗನ ಹೆರಾತ್ 10-0-36-3

ಶ್ರೀಲಂಕಾ: 48.5 ಓವರುಗಳಲ್ಲಿ 215
ಮಾಹೇಲ ಜಯವರ್ಧನೆ ಬಿ ಕ್ಲಿಂಟ್ ಮೆಕ್‌ಕೀ  15
ತಿಲಕರತ್ನೆ ದಿಲ್ಶಾನ್ ಸಿ ಡೇವಿಡ್ ಹಸ್ಸಿ ಬಿ ಬ್ರೆಟ್ ಲೀ  08
ಕುಮಾರ ಸಂಗಕ್ಕಾರ ಸಿ ಶೇನ್ ವ್ಯಾಟ್ಸನ್ ಬಿ ಬ್ರೆಟ್ ಲೀ  19
ದಿನೇಶ್ ಚಂಡಿಮಾಲ ಎಲ್‌ಬಿಡಬ್ಲ್ಯು ಬಿ ಕ್ಲಿಂಟ್ ಮೆಕ್‌ಕೀ  05
ಲಾಹಿರು ತಿರುಮನ್ನೆ ಸಿ ಡೇವಿಡ್ ವಾರ್ನರ್ ಬಿ ಶೇನ್ ವ್ಯಾಟ್ಸನ್ 30

ಉಪುಲ್ ತರಂಗ ಸಿ ಮ್ಯಾಥ್ಯೂ ವೇಡ್ ಬಿ ಶೇನ್ ವ್ಯಾಟ್ಸನ್  71
ಚಾಮರ ಕಪುಗೆಡೆರಾ ಸಿ ಮ್ಯಾಥ್ಯೂ ವೇಡ್ ಬಿ ಕ್ಲಿಂಟ್ ಮೆಕ್‌ಕೀ  07
ನುವಾನ್ ಕುಲಶೇಖರ ಸಿ ನಥಾನ್ ಲಿಯಾನ್ ಬಿ ಬ್ರೆಟ್ ಲೀ  15
ಫರ್ವೀಜ್ ಮಹಾರೂಫ್ ಔಟಾಗದೆ  18
ರಂಗನ ಹೆರಾತ್ ಬಿ ಕ್ಲಿಂಟ್ ಮೆಕ್‌ಕೀ  00
ಲಸಿತ್ ಮಾಲಿಂಗ ಬಿ ಕ್ಲಿಂಟ್ ಮೆಕ್‌ಕೀ  06
ಇತರೆ: (ಲೆಗ್‌ಬೈ-9, ವೈಡ್-12)  21

ವಿಕೆಟ್ ಪತನ: 1-23 (ತಿಲಕರತ್ನೆ ದಿಲ್ಶಾನ್; 2.6), 2-47 (ಕುಮಾರ ಸಂಗಕ್ಕಾರ; 6.2), 3-52 (ದಿನೇಶ್ ಚಂಡಿಮಾಲ; 7.3), 4-53 (ಮಾಹೇಲ ಜಯವರ್ಧನೆ; 9.3), 5-113 (ಲಾಹಿರು ತಿರುಮನ್ನೆ; 26.4), 6-142 (ಚಾಮರ ಕಪುಗೆಡೆರಾ; 35.5), 7-172 (ನುವಾನ್ ಕುಲಶೇಖರ; 38.5), 8-204 (ಉಪುಲ್ ತರಂಗ; 45.6), 9-205 (ರಂಗನ ಹೆರಾತ್; 46.3), 10-215 (ಲಸಿತ್ ಮಾಲಿಂಗ; 48.5).
ಬೌಲಿಂಗ್: ಬ್ರೆಟ್ ಲೀ 8-0-59-3 (ವೈಡ್-3), ಕ್ಸೇವಿಯರ್ ಡೋಹರ್ಟಿ 8-0-49-0 (ವೈಡ್-2), ಕ್ಲಿಂಟ್ ಮೆಕ್‌ಕೀ 9.5-1-28-5, ಶೇನ್ ವ್ಯಾಟ್ಸನ್ 7-1-13-2, ನಥಾನ್ ಲಿಯಾನ್ 8-0-36-0, ಡೇನಿಯಲ್ ಕ್ರಿಸ್ಟೀನ್ 8-1-21-0

ಫಲಿತಾಂಶ: ಆಸ್ಟ್ರೇಲಿಯಾಕ್ಕೆ 16 ರನ್‌ಗಳ ಗೆಲುವು; ಮೂರು ಪಂದ್ಯಗಳ ಫೈನಲ್‌ನಲ್ಲಿ 2-1ರಲ್ಲಿ ವಿಜಯ.
ಪಂದ್ಯ ಶ್ರೇಷ್ಠ: ಕ್ಲಿಂಟ್ ಮೆಕ್‌ಕೀ.

ಸರಣಿ ಸರ್ವೋತ್ತಮ: ತಿಲಕರತ್ನೆ ದಿಲ್ಶಾನ್.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.