ಮೊನಾಕೊ (ಪಿಟಿಐ): ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಭಾನುವಾರ ಇಲ್ಲಿ ಆರಂಭವಾದ ಆ್ಯಂಬರ್ ಬ್ಲೈಂಡ್‌ಫೋಲ್ಡ್ ಹಾಗೂ ರ್ಯಾಪಿಡ್ ಚೆಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.
ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಆನಂದ್ 1.5-0.5 ಪಾಯಿಂಟ್‌ಗಳಿಂದ ಬಲ್ಗೇರಿಯಾದ ವೆಸೆಲಿನ್ ಟೊಪಲೋವ್ ಅವರನ್ನು ಮಣಿಸಿದ್ದಾರೆ.
ಬ್ಲೈಂಡ್‌ಫೋಲ್ಡ್ ವಿಭಾಗದಲ್ಲಿ ಬಿಳಿಯ ಕಾಯಿಗಳಿಂದ ಆಡಿದ ಗ್ರ್ಯಾಂಡ್‌ಮಾಸ್ಟರ್ ಪೂರ್ಣ ಪಾಯಿಂಟ್ ಗಳಿಸಿದರು. ಆದರೆ ರ್ಯಾಪಿಡ್ ವಿಭಾಗದಲ್ಲಿ ಡ್ರಾ ಮಾಡಿಕೊಂಡು ಪಾಯಿಂಟ್ ಹಂಚಿಕೊಂಡರು.
ಆದರೆ ರಷ್ಯಾದ ಅಲೆಕ್ಸಾಂಡರ್ ಗ್ರಿಶ್‌ಚುಕ್ ಅವರು ತಮ್ಮದೇ ದೇಶದ ವ್ಲಾಡಿಮಿರ್ ಕ್ರಾಮ್ನಿಕ್ ಅವರನ್ನು ಮಣಿಸಿದರು.
ಇದೊಂದು ಶಾಕ್ ಫಲಿತಾಂಶ ಕೂಡ. ಅವರು ಪೂರ್ಣ ಎರಡು ಪಾಯಿಂಟ್ ಕಲೆಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.