ADVERTISEMENT

ಇಂದಿನಿಂದ ರಾಜ್ಯ ಜೂಡೊ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 19:30 IST
Last Updated 11 ಅಕ್ಟೋಬರ್ 2012, 19:30 IST

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಉತ್ತರ ವಲಯದ ವತಿಯಿಂದ, ನಿಕೇತನ್ ಎಜುಕೇಷನ್ ಟ್ರಸ್ಟ್ ಆಶ್ರಯದಲ್ಲಿ ಅಕ್ಟೋಬರ್ 12ರಿಂದ 14ರ ವರೆಗೆ ಇಲ್ಲಿ ರಾಜ್ಯ ಮಟ್ಟದ ಜೂಡೊ ಚಾಂಪಿಯನ್‌ಷಿಪ್ ನಡೆಯಲಿದೆ.

ಇಂದಿರಾನಗರದಲ್ಲಿರುವ ಇಂದಿರಾನಗರ ಪ್ರೌಢಶಾಲೆಯ ಗೋಲ್ಡನ್ ಜುಬ್ಲಿ ಸಭಾಂಗಣದಲ್ಲಿ ಮಧ್ಯಾಹ್ನ 3.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಬಾಲಕ ಮತ್ತು ಬಾಲಕಿಯರ 14 ಮತ್ತು 17 ವರ್ಷದೊಳಗಿನವರ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. 15 ಬಾಲಕರ ಹಾಗೂ 12 ಬಾಲಕಿಯರು ತಂಡಗಳು ಪೈಪೋಟಿ ನಡೆಸಲಿವೆ.  ಈ ವೇಳೆ ರಾಷ್ಟ್ರೀಯ ಜೂಡೊ ಚಾಂಪಿಯನ್‌ಷಿಪ್‌ಗೆ ತಂಡ ಆಯ್ಕೆ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.