ನವದೆಹಲಿ: ಭಾರತದ ಒಬ್ಬ ಕ್ರಿಕೆಟ್ ಆಟಗಾರ ಉದ್ದೀಪನ ಮದ್ದು ಸೇವಿಸಿರುವ ವಿವರ ಜಾಗತಿಕ ಉದ್ದೀಪನ ಮದ್ದು ತಡೆ ಘಟಕ (ವಾಡಾ)ದ 2016ನೇ ಸಾಲಿನ ವರದಿಯಲ್ಲಿ ಬಹಿರಂಗಗೊಂಡಿದೆ. ಒಟ್ಟು 153 ಆಟಗಾರರನ್ನು ಪರೀಕ್ಷೆಗೆ ಒಳಪಡಿಸಿದ್ದು ಈ ಪೈಕಿ ಒಬ್ಬರು ಮಾತ್ರ ನಿಷೇಧಿತ ಉದ್ದೀಪನ ಮದ್ದು ಸೇವಿಸಿರುವುದು ಸಾಬೀತಾಗಿದೆ ಎನ್ನಲಾಗಿದೆ. ಆಟಗಾರನ ಹೆಸರನ್ನು ಬಹಿರಂಗ ಮಾಡಲಿಲ್ಲ.
ಈ ಹಿಂದೆ ವೇಗದ ಬೌಲರ್ ಪ್ರದೀಪ್ ಸಾಂಗ್ವಾನ್ ಇದೇ ರೀತಿ ಉದ್ದೀಪನ ಔಷಧಿ ಸೇವಿಸಿ ಸಿಕ್ಕಿ ಬಿದ್ದಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಪರ ಆಡುತ್ತಿದ್ದಾಗ ಅವರು ಸಿಕ್ಕಿ ಬಿದ್ದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.