ADVERTISEMENT

ಎಚ್‌ಐವಿ ಪೀಡಿತರಿಗೆ ಸೆಹ್ವಾಗ್ ಸಾಂತ್ವನ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2011, 19:30 IST
Last Updated 4 ಮಾರ್ಚ್ 2011, 19:30 IST

ಬೆಂಗಳೂರು: ಎಚ್‌ಐವಿ ಸೋಂಕು ಪೀಡಿತರ ವಿಷಯವಾಗಿ ಇರುವ ಎಲ್ಲ ಪೂರ್ವಾಗ್ರಹಗಳನ್ನು ತೊರೆದು ಅವರಿಗೆ ನೈತಿಕ ಬೆಂಬಲ ನೀಡುವಂತೆ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಕ್ರಿಕೆಟ್ ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ. ನಗರದ ಹಾಜಿ ಸರ್ ಇಸ್ಮಾಯಿಲ್ ಸೇಟ್ ಘೋಷಾ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿದ ಸೆಹ್ವಾಗ್, ಎಚ್‌ಐವಿ ಸೋಂಕು ಪೀಡಿತರ ಜೊತೆ ಅಲ್ಲಿ ಮುಕ್ತವಾಗಿ ಬೆರೆತು ಸ್ವಲ್ಪ ಕಾಲ ಕಳೆದರು. ಸೋಂಕು ಪೀಡಿತರಲ್ಲಿ ಜೀವನೋತ್ಸಾಹವನ್ನೂ ತುಂಬಲು ಕೂಡ ಪ್ರಯತ್ನ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.