ನಾಗಪುರ (ಪಿಟಿಐ): ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ಕೇಂದ್ರದ ಮಾಜಿ ಸಚಿವ ಎನ್‌ಕೆಪಿ ಸಾಳ್ವೆ ಅವರ ಅಂತ್ಯಕ್ರಿಯೆ ಸರ್ಕಾರಿ ಗೌರವದೊಂದಿಗೆ ಸೋಮವಾರ ಇಲ್ಲಿನ ಜರಿಪಾಟ್ಕಾದಲ್ಲಿರುವ ಸ್ಮಶಾನದಲ್ಲಿ ನಡೆಯಿತು.
ಅಲ್ಪಕಾಲದ ಅಸ್ವಸ್ಥತೆಯಿಂದ ಬಳಲಿದ್ದ ಸಾಳ್ವೆ (90 ವರ್ಷ) ಭಾನುವಾರ ನವದೆಹಲಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಮೃತದೇಹವನ್ನು ಭಾನುವಾರ ರಾತ್ರಿ ನವದೆಹಲಿಯಿಂದ ನಾಗಪುರಕ್ಕೆ ತರಲಾಗಿತ್ತು.
(ವಿಷಾದ: ಸೋಮವಾರದ ಸಂಚಿಕೆಯಲ್ಲಿ ಸಾಳ್ವೆ ಅವರ ಭಾವಚಿತ್ರದ ಬದಲು ವಸಂತ ಸಾಠೆ ಅವರ ಚಿತ್ರ ತಪ್ಪಾಗಿ ಪ್ರಕಟಗೊಂಡಿರುವುದಕ್ಕೆ ವಿಷಾದಿಸುತ್ತೇವೆ. -ಸಂ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.