ADVERTISEMENT

ಎನ್‌ಬಿಎ ಲೀಗ್ ಬ್ಯಾಸ್ಕೆಟ್‌ಬಾಲ್: ಎಚ್‌ಎಎಸ್‌ಸಿ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 19:30 IST
Last Updated 10 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಉಮಾ ಶಂಕರ್ ಗಳಿಸಿದ 17 ಪಾಯಿಂಟ್‌ಗಳ ನೆರವಿನಿಂದ ಎಚ್‌ಎಎಸ್‌ಸಿ ತಂಡದವರು ಇಲ್ಲಿ ನಡೆಯುತ್ತಿರುವ ಮಹೀಂದ್ರಾ ಎನ್‌ಬಿಎ ಚಾಲೆಂಜ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಪುರುಷರ ವಿಭಾಗದ ಲೀಗ್ ಪಂದ್ಯದಲ್ಲಿ ಗೆಲುವು ಪಡೆದರು.

ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಎಚ್‌ಎಎಸ್‌ಸಿ ತಂಡ 78-69ಪಾಯಿಂಟ್‌ಗಳಿಂದ ಮಂಡ್ಯದ ವಿಬಿಸಿ ತಂಡವನ್ನು ಸೋಲಿಸಿತು. ಮಂಡ್ಯ ತಂಡದ ಅರವಿಂದ್ ಸಹ 19 ಪಾಯಿಂಟ್ ಗಳಿಸಿ ಗಮನ ಸೆಳೆದರು.

ಬಾಲಕರ 18 ವರ್ಷದೊಳಗಿನವರ ವಿಭಾಗದಲ್ಲಿ ಗ್ರೀನ್ಸ್ ಬ್ಯಾಸ್ಕೆಟ್‌ಬಾಲ್ ಕ್ಲಬ್ 49-47ರಲ್ಲಿ ನ್ಯಾಷನಲ್ ಗೇಮ್ಸ ವಿಲೇಜ್ ತಂಡದ ಮೇಲೂ, ಬೀಗಲ್ಸ್ ಬ್ಯಾಸ್ಕೆಟ್‌ಬಾಲ್ ಕ್ಲಬ್ 61-20ರಲ್ಲಿ ಅಪ್ಪಯ್ಯ ತಂಡದ ವಿರುದ್ಧವೂ, ಸ್ಪೋರ್ಟ್ಸ್ ಹಾಸ್ಟೆಲ್ ಬೆಂಗಳೂರು ತಂಡ 46-14ರಲ್ಲಿ ಬಾಲಕೃಷ್ಣ ತಂಡದ ಮೇಲೂ, ಸದರ್ನ್ ಬ್ಲೂಸ್ ತಂಡ 71-25ರಲ್ಲಿ ಬಿ.ಸಿ.ಬಿ.ಸಿ. ತಂಡದ ವಿರುದ್ಧವೂ ಗೆಲುವು ಸಾಧಿಸಿತು.

ಬಾಲಕರ 13 ವರ್ಷದೊಳಗಿನವರ ವಿಭಾಗದಲ್ಲಿ ಜಯನಗರ ಸ್ಪೋರ್ಟ್ಸ್ ಕ್ಲಬ್ 12-11ರಲ್ಲಿ ಕೋಲಾರದ ಕನಕ ತಂಡದ ಮೇಲೂ, ಹಲಸೂರು ಸ್ಪೋರ್ಟ್ಸ್ ಕ್ಲಬ್ 40-14ರಲ್ಲಿ ವಿದ್ಯಾ ನಿಕೇತನ ತಂಡದ ವಿರುದ್ಧವೂ, ಭಾರತ್ ಸ್ಪೋರ್ಟ್ಸ್ ಕ್ಲಬ್ 27-9ರಲ್ಲಿ ಬಿ.ಸಿ.ಬಿ.ಸಿ ತಂಡದ ಮೇಲೂ ಜಯ ಪಡೆಯಿತು.

ಬಾಲಕಿಯರ 16 ವರ್ಷದೊಳಗಿನವರ ವಿಭಾಗದ ಪಂದ್ಯದಲ್ಲಿ ವಿದ್ಯಾನಗರ ಸ್ಪೋರ್ಟ್ಸ್ ಶಾಲೆ 30-29ರಲ್ಲಿ ಹಲಸೂರು ಸ್ಪೋರ್ಟ್ಸ್ ಯೂನಿಯನ್ ಎದುರು ಗೆಲುವು ಸಾಧಿಸಿತು. 18 ವರ್ಷದೊಳಗಿನವರ ವಿಭಾಗದಲ್ಲಿ ಬೀಗಲ್ಸ್ ತಂಡ 47-9ರಲ್ಲಿ ರಾಜಕುಮಾರ್ ಕ್ಲಬ್ ತಂಡವನ್ನು ಸೋಲಿಸಿದರು. 13 ವರ್ಷದೊಳಗಿನವರ ವಿಭಾಗದಲ್ಲಿ ಮೌಂಟ್ ಕ್ಲಬ್ 30-24ರಲ್ಲಿ ಜೆಎಸ್‌ಸಿ ತಂಡವನ್ನು ಮಣಿಸಿತು.

ಹಿಂದೆ ಸರಿದ ವಿಜಯಾ ಬ್ಯಾಂಕ್: ಕಳೆದ ಬಾರಿಯ ಚಾಂಪಿಯನ್ ವಿಜಯಾ ಬ್ಯಾಂಕ್ ತಂಡ ಈ ಟೂರ್ನಿಯಿಂದ ಹಿಂದೆ ಸರಿದಿದೆ. ಸಂಘಟಕರು ವಿಧಿಸಿದ ಷರತ್ತಿಗೆ ಒಪ್ಪದ ಕಾರಣ ಬ್ಯಾಂಕ್ ಹಾಗೂ ಸಂಘಟಕರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.