ADVERTISEMENT

ಏರ್ ಇಂಡಿಯಾ, ಎಸ್‌ಬಿಎಂ ಫೈನಲ್‌ಗೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 19:30 IST
Last Updated 6 ಫೆಬ್ರುವರಿ 2012, 19:30 IST

ಕೊಲ್ಹಾರ (ವಿಜಾಪುರ): ಮುಂಬೈನ ಏರ್ ಇಂಡಿಯಾ ತಂಡ ಹಾಗೂ ಬೆಂಗಳೂರಿನ ಎಸ್‌ಬಿಎಂ ತಂಡಗಳು ಸ್ವಾಮಿ ವಿವೇಕಾನಂದ ಯುವಕ ಮಂಡಳಿ ಹಮ್ಮಿಕೊಂಡಿರುವ ರಾಷ್ಟ್ರಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಸೋಮವಾರ ಫೈನಲ್ ತಲುಪಿದವು.

ಮೊದಲ ಸೆಮಿಫೈನಲ್‌ನಲ್ಲಿ ಏರ್ ಇಂಡಿಯಾ ತಂಡ 24-8ರಿಂದ ರೆಡ್ ಆರ್ಮಿ ದೆಹಲಿ ತಂಡವನ್ನು  ಮಣಿಸಿದರೆ, ಇನ್ನೊಂದು ಸೆಮಿಫೈನಲ್‌ನಲ್ಲಿ ಬೆಂಗಳೂರಿನ ಎಸ್‌ಬಿಎಂ ತಂಡ 17-6ರಿಂದ ರೈಲ್ವೆ ವೀಲ್ ಫ್ಯಾಕ್ಟರಿ ತಂಡವನ್ನು ಪರಾಭವಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.