ಮುಂಬೈ (ಪಿಟಿಐ): ಪ್ರಸಕ್ತ ಸಾಲಿನ ಐಪಿಎಲ್ ಸಂಭ್ರಮಕ್ಕೆ ಬಿಸಿಸಿಐ ಸಜ್ಜುಗೊಳ್ಳುತ್ತಿರುವಾಗಲೇ, ಬಾಂಬೆ ಹೈಕೋರ್ಟ್‌ನಲ್ಲಿ ಇದೀಗ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ (ಪಿಐಎಲ್)ಯೊಂದು ವಿವಾದಕ್ಕೆ ಎಡೆಕೊಟ್ಟಿದೆ.
ಸಂತೋಷ್ ಪಚಾಲಗ್ ಎಂಬುವವರು ಸಲ್ಲಿಸಿರುವ ಈ ಅರ್ಜಿಯಲ್ಲಿ `ಹಿಂದಿನ ಪಂದ್ಯಗಳ ಭದ್ರತಾ ವ್ಯವಸ್ಥೆಗಾಗಿ ಬಿಸಿಸಿಐಯವರು ಮುಂಬೈ ಪೊಲೀಸರಿಗೆ 5,17,73,238 ರೂಪಾಯಿಗಳಷ್ಟು ಹಣ ನೀಡಬೇಕಿದೆ~ ಎಂದು ತಿಳಿಸಿದ್ದಾರೆ.
`2010ರ ಮಾರ್ಚ್‌ನಲ್ಲಿ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಆರು ಪಂದ್ಯಗಳು ನಡೆದಿದ್ದವು. ಆಗ 3,345 ಪೊಲೀಸರಿಂದ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಆಗ ನವಿಮುಂಬೈನಲ್ಲಿ ಪೊಲೀಸರ ಕೊರತೆ ಇದ್ದುದರಿಂದ ಪುಣೆ ಮತ್ತು ಸತಾರಗಳಿಂದಲೂ ಪೊಲೀಸರನ್ನು ಕರೆಸಲಾಗಿತ್ತು~ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
`ಬಿಸಿಸಿಐನವರು ಪೊಲೀಸರಿಗೆ ಸಲ್ಲಿಸಬೇಕಿರುವ ಬಾಕಿ ಹಣವನ್ನು ಸಂದಾಯ ಮಾಡುವವರೆಗೆ ಏಪ್ರಿಲ್ 4ರಿಂದ ಆರಂಭವಾಗುವ ಐಪಿಎಲ್ ಪಂದ್ಯಗಳಿಗೆ ಯಾವುದೇ ರೀತಿಯ ಭದ್ರತಾ ವ್ಯವಸ್ಥೆ ನೀಡಬಾರದೆಂದು ಪೊಲೀಸರಿಗೆ ನಿರ್ದೇಶನ ನೀಡಬೇಕು~ ಎಂದು ಅರ್ಜಿಯಲ್ಲಿ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.