ನವದೆಹಲಿ (ಪಿಟಿಐ): ಅಮೆರಿಕಾದ ಪಾಪ್ ಗಾಯಕಿ ಕ್ಯಾತಿ ಪೆರ್ರಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಟೂರ್ನಿಯ ಐದನೇ ಅವತರಣಿಕೆಯ ಉದ್ಘಾಟನಾ ಸಮಾರಂಭಕ್ಕೆ ರಂಗೇರಿಸಲಿದ್ದಾರೆ.
ಏಪ್ರಿಲ್ 3ರಂದು ಚೆನ್ನೈನ ವೈಎಂಸಿಎ ಮೈದಾನದಲ್ಲಿ ನಡೆಯುವ ವರ್ಣರಂಜಿತ ಸಮಾರಂಭದಲ್ಲಿ ದೇಶದ ಖ್ಯಾತ ಸಿನಿಮಾ ಹಾಗೂ ಸಂಗೀತ ತಾರೆಗಳ ಜೊತೆಗೆ ವಿದೇಶಿ ಪಾಪ್ ತಾರೆಯೂ ಪ್ರೇಕ್ಷಕರನ್ನು ರಂಜಿಸಲಿದ್ದಾರೆಂದು ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್, ನಟ ಸಲ್ಮಾನ್ ಖಾನ್, ನಟಿ ಪ್ರಿಯಾಂಕಾ ಚೋಪ್ರಾ ಅವರು ಕೂಡ ಪ್ರಮುಖ ಆಕರ್ಷಣೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.