ADVERTISEMENT

ಕರ್ನಾಟಕ ಆಟಗಾರರ ಮೇಲುಗೈ

ಅಖಿಲ ಭಾರತ ರ್‍ಯಾಂಕಿಂಗ್ ಟೆನಿಸ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2016, 19:30 IST
Last Updated 25 ಜನವರಿ 2016, 19:30 IST
ಕಲಬುರ್ಗಿಯಲ್ಲಿ ನಡೆಯುತ್ತಿರುವ ಎಐಟಿಎ ಟೆನಿಸ್ ಟೂರ್ನಿಯಲ್ಲಿ ಸೋಮವಾರ ಕರ್ನಾಟಕದ ಆರ್‌. ರಿಭವ್‌ ಆಟದ ವೈಖರಿ –ಪ್ರಜಾವಾಣಿ ಚಿತ್ರ/ಪಿ.ಎಸ್‌. ಕೃಷ್ಣಕುಮಾರ್‌
ಕಲಬುರ್ಗಿಯಲ್ಲಿ ನಡೆಯುತ್ತಿರುವ ಎಐಟಿಎ ಟೆನಿಸ್ ಟೂರ್ನಿಯಲ್ಲಿ ಸೋಮವಾರ ಕರ್ನಾಟಕದ ಆರ್‌. ರಿಭವ್‌ ಆಟದ ವೈಖರಿ –ಪ್ರಜಾವಾಣಿ ಚಿತ್ರ/ಪಿ.ಎಸ್‌. ಕೃಷ್ಣಕುಮಾರ್‌   

ಕಲಬುರ್ಗಿ: ಕರ್ನಾಟಕದ ಆಟಗಾರರು ಇಲ್ಲಿ ಸೋಮವಾರ ಆರಂಭಗೊಂಡ ‘ಝೆಸ್ಟ್ ಕ್ಲಬ್ ಓಪನ್ 2016 ಎಐಟಿಎ ಪುರುಷರ 50ಕೆ’ ರ್‍ಯಾಂಕಿಂಗ್ ಟೂರ್ನಿಯ ಮೊದಲ ದಿನ  ಉತ್ತಮ ಆಟ ಪ್ರದರ್ಶಿಸಿ ಗಮನ ಸೆಳೆದರು.

ಭರವಸೆಯ ಆಟಗಾರ ಕರ್ನಾಟಕದ ಆರ್‌. ರಿಭವ್‌ 6–0,6–2ಗಳ ನೇರ ಸೆಟ್‌ಗಳಿಂದ ಆ್ಯಡ್ರಿಯನ್ ಬ್ರೂಸ್ ಅವರನ್ನು ಸೋಲಿಸಿ ಎರಡನೇ ಹಂತಕ್ಕೆ ತಲುಪಿದರು. ತೆಲಂಗಾಣದ ಸಿದ್ಧಾರ್ಥ ಪೊನ್ನಾಲ ಕರ್ನಾಟಕದ ವಿನಯ್‌ ಕುಮಾರ್‌ ವಿರುದ್ಧ 6–1,6–1ರ ನೇರ ಸೆಟ್‌ಗಳಿಂದ ಜಯಗಳಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದರು.

ಫಲಿತಾಂಶ: ನಿತಿನ್‌ ಗುಂಡುಬೋಯ್ನಾ (ತೆಲಂಗಾಣ)6–2,6–2ರಲ್ಲಿ ದೇಬ ಪ್ರಕಾಶ್‌ ಗುರು(ಆಂಧ್ರ) ವಿರುದ್ಧ, ರಸ್ವಾನಿ ರವಿ(ತಮಿಳುನಾಡು) 6–4,6–1ರಲ್ಲಿ ವೈ. ವಿಶಾಲ್‌ ರೆಡ್ಡಿ(ತೆಲಂಗಾಣ) ವಿರುದ್ಧ, ಫಯಾಜ್‌ ಹುಸೇನ್‌(ಮಹಾರಾಷ್ಟ್ರ) 6–1,7–5 ರಲ್ಲಿ ಮೌಲಿನ್‌ ಆರ್‌ ಅಘಾರ ವಿರುದ್ಧ ಗೆದ್ದು ಎರಡನೇ ಹಂತಕ್ಕೆ ಕಾಲಿ ಟ್ಟರು.

ಸಚಿತ್‌ ತುಲ್ಸಾನಿ (ಕರ್ನಾಟಕ) 7–5,7–6(3)ರಲ್ಲಿ ಉತ್ಕರ್ಷ್ ಮಿಶ್ರಾ ಎದುರು, ಶೇಖರ್‌ ಜೈಸ್ವಾಲ್‌ 6–3,6–4 ರಲ್ಲಿ ಚಿರಾಜ್ನ ಸಾಹು ಎದುರು, ಶೇಖ್‌ ಒಸಾಮ 6–4,7–5ರಲ್ಲಿ ಅಶುತೋಷ್‌ ದಾಸ್ ಎದುರು ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದರು.

ಪ್ರಣವ್‌ ಕಾರ್ತಿಕ್‌ (ಕರ್ನಾಟಕ) 4–6,6–3,7–5ರಲ್ಲಿ ಕಾರ್ತಿಕ್‌ ಜಿ. ಸಾಯಿ ವಿರುದ್ಧ, ಶಾಂತಕುಮಾರ್‌ (ಕರ್ನಾಟಕ) 6–3,6–4ರಲ್ಲಿ ಅಲೋಕ್‌ ಆರಾಧ್ಯ ಎದುರು ಗೆದ್ದು ಎರಡನೇ ಹಂತಕ್ಕೆ ಕಾಲಿಟ್ಟರು. ಎಲ್‌. ಹರ್ಷ (ಕರ್ನಾಟಕ) 6–4,6–4ರಲ್ಲಿ ಹರ್ಷವರ್ಧನ ವಿರುದ್ಧ ಗೆದ್ದರು. ಎ. ಪ್ರಸನ್ನ(ಕರ್ನಾಟಕ) 6–1,6–4ರಲ್ಲಿ ರೇಹನ್‌ ಕುಮಾರ್‌ ಎದುರು ಗೆದ್ದರು. ರೋಹನ್‌ ಭಾಟಿಯಾ (ಮಹಾರಾಷ್ಟ್ರ) 6–4,3–6,6–2ರಲ್ಲಿ ರೋಹಿತ್‌ ಕೃಷ್ಣ ಎದುರು ಗೆದ್ದರು. ಗೌತಮ್‌ ರಾಮ್‌ಕುಮಾರ್‌(ಕರ್ನಾಟಕ) 6–3,7–6(4) ರಲ್ಲಿ ಪ್ರಣವ್‌ ವಿರುದ್ದ ಗೆದ್ದು ಎರಡನೇ ಹಂತಕ್ಕೆ ಪ್ರವೇಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT