ADVERTISEMENT

ಕಲ್ಮಾಡಿ ಅಮಾನತಿಗೆ ಸೂಚನೆ; ಕ್ಲೀನ್ ಸ್ಪೋರ್ಟ್ಸ್ ಸ್ವಾಗತ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 19:30 IST
Last Updated 8 ಅಕ್ಟೋಬರ್ 2012, 19:30 IST

ನವದೆಹಲಿ (ಪಿಟಿಐ): ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಕ್ರೀಡಾ ಆಡಳಿತಗಾರ ಸುರೇಶ್ ಕಲ್ಮಾಡಿ, ವಿ.ಕೆ.ವರ್ಮ ಹಾಗೂ ಲಲಿತ್ ಭಾನೋಟ್ ಅವರನ್ನು ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಯಾವುದೇ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಶೀಘ್ರವೇ ಅಮಾನತುಗೊಳಿಸಿ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಸೂಚಿಸಿರುವುದನ್ನು `ಕ್ಲೀನ್ ಸ್ಪೋರ್ಟ್ಸ್ ಇಂಡಿಯಾ~ (ಸಿಎಸ್‌ಐ) ಸ್ವಾಗತಿಸಿದೆ.

ಅಷ್ಟು ಮಾತ್ರವಲ್ಲದೇ, ಈ ಮೂವರನ್ನು ಅಮಾನತುಗೊಳಿಸಿರುವುದನ್ನು ಖಚಿತಪಡಿಸಿಕೊಳ್ಳುವಂತೆ ಕ್ಲೀನ್ ಸ್ಪೋರ್ಟ್ಸ್ ಐಒಸಿಗೆ ಪತ್ರ ಬರೆದಿದೆ. `ಅಮಾನತು ಮಾಡುವಂತೆ ಪತ್ರ ಬರೆದಿರುವುದಕ್ಕೆ ಧನ್ಯವಾದಗಳು. ಈ ಸೂಚನೆಗೆ ಭಾರತದ ಎಲ್ಲರ ಬೆಂಬಲವಿದೆ. ಆದರೆ ಅಮಾನತುಗೊಳಿಸಲಾಗಿದೆಯೇ ಇಲ್ಲವೇ ಎಂಬುದರ ಬಗ್ಗೆ ನಿಗಾ ಇಡಬೇಕು~ ಎಂದು ಐಒಸಿ ಅಧ್ಯಕ್ಷ ಜಾಕ್ ರೋಗ್‌ಗೆ ಬರೆಯಲಾದ ಪತ್ರದಲ್ಲಿ ಸಿಎಸ್‌ಐ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.