ADVERTISEMENT

ಕಾಮನ್‌ವೆಲ್ತ್‌: ಕುಸ್ತಿಪಟು ರಾಹುಲ್‌, ಸುಶೀಲ್‌ಗೆ ಚಿನ್ನ; ಬೆಳ್ಳಿಗೆದ್ದ ಬಬಿತಾ; ಕಿರಣ್‌ಗೆ ಕಂಚು

ಏಜೆನ್ಸೀಸ್
Published 12 ಏಪ್ರಿಲ್ 2018, 9:24 IST
Last Updated 12 ಏಪ್ರಿಲ್ 2018, 9:24 IST
ರಾಹುಲ್‌ ಅವಾರೆ
ರಾಹುಲ್‌ ಅವಾರೆ   

ಗೋಲ್ಡ್‌ಕೋಸ್ಟ್‌ (ಆಸ್ಟ್ರೇಲಿಯಾ): ಇಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಳುಗಳು ಗುರವಾರವೂ ಸಹ ಪದಕಗಳ ಬೇಟೆಯನ್ನು ಮುಂದುವರಿಸಿದ್ದಾರೆ.

ಪುರುಷರ 57 ಕೆ.ಜಿ.ವಿಭಾಗದಲ್ಲಿ ಕುಸ್ತಿಪಟು ರಾಹುಲ್‌ ಅವಾರೆ ಚಿನ್ನದ ಪದಕ ಜಯಿಸಿದ್ದಾರೆ. ಕೆನಡಾದ ಸ್ಟಿವನ್‌ ತಕಹಷಿ ಅವರನ್ನು ರಾಹುಲ್‌ 15–7 ಪಾಯಿಂಟ್‌ಗಳಿಂದ ಸ್ಪರ್ಧೆಯಲ್ಲಿ ಮಣಿಸಿದರು.

ರಾಹುಲ್ ಈ ಹಿಂದೇ ಏಷಿಯನ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಮತ್ತು 2011 ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲೂ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿದ್ದರು.

ಸುಶೀಲ್‌ಗೂ ಚಿನ್ನ : 74 ಕೆ.ಜಿ.ಪುರುಷರ ಫ್ರೀಸ್ಟೈಲ್‌ ಕುಸ್ತಿ ವಿಭಾಗದಲ್ಲಿ ಸುಶೀಲ್‌ ಕುಮಾರ್‌ ಸಹ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ.

ADVERTISEMENT

ಇವರು ಅಂತಿಮ ಸುತ್ತಿನಲ್ಲಿ ದಕ್ಷಿಣ ಆಫ್ರಿಕಾದ ಜೊಹಾನ್ನೆಸ್‌ ಬೊಥಾ ಅವರನ್ನು ಮಣಿಸಿದರು. ಎದುರಾಳಿಯನ್ನು ಪಳಗಿಸಿದ ಪರಿಗೆ ಸುನೀಲ್‌ 10–0 ಅಂಕಗಳಿಂದ ಮುನ್ನಡೆ ಕಾಯ್ದುಕೊಂಡರು.


ಸುಶೀಲ್‌ ಕುಮಾರ್‌ –ಪಿಟಿಐ ಚಿತ್ರ

ಚಿನ್ನದಿಂದ ವಂಚಿತಳಾದ ಬಬಿತಾ: 53 ಕೆ.ಜಿ. ಮಹಿಳಾ ಕುಸ್ತಿ ವಿಭಾಗದಲ್ಲಿ ಸೆಣಸಿದ ಬಬಿತಾ ಕುಮಾರಿ ಅಂತಿಮ ಹಣಾಹಣಿಯಲ್ಲಿ ಕೆನಡಾದ ಡಿಯಾನಾ ವೆಕರ್‌ ಎದುರು ಸೋತು ಬೆಳ್ಳಿ ಪದಕಕ್ಕೆ ತೃಪ್ತರಾದರು.


ಕೆನಡಾದ ಡಿಯಾನಾ ವೆಕರ್‌ಗೆ ಬಬಿತಾ ಕುಮಾರಿ ಹಾಕಿದ ಪಟ್ಟು –ಪಿಟಿಐ ಚಿತ್ರ
***

76 ಕೆ.ಜಿ. ಮಹಿಳೆಯರ ಕುಸ್ತಿ ವಿಭಾಗದಲ್ಲಿ ಕಿರಣ್‌ ಕಂಚಿನ ಪದಕ ಗಳಿಸಿದ್ದಾರೆ. ಮಾರಿಷಶ್‌ನ ಕಟೌಸ್ಕಿಯಾ ಪರಿಯಾದಾವೆನ್‌ ಅವರನ್ನು 10–0 ಪಾಯಿಂಟ್‌ಗಳಿಂದ ಇವರು ಮಣಿಸಿದರು.


ಕಟೌಸ್ಕಿಯಾ ಮಣಿಸಿದ ಕಿರಣ್‌ –ರಾಯಿಟರ್ಸ್‌ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.