ADVERTISEMENT

ಕಿಂಗ್ಸ್‌ಗೆ ಕಿಂಗ್ಸ್ ಇಲೆವೆನ್ ಎದುರಾಳಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2012, 19:30 IST
Last Updated 27 ಏಪ್ರಿಲ್ 2012, 19:30 IST

ಚೆನ್ನೈ (ಪಿಟಿಐ): ಒಂದೆಡೆ ಚೆನ್ನೈ ಸೂಪರ್ ಕಿಂಗ್ಸ್, ಇನ್ನೊಂದೆಡೆ ಕಿಂಗ್ಸ್ ಇಲೆವೆನ್ ಪಂಜಾಬ್. ಇದರಲ್ಲಿ ಗೆಲ್ಲುವ ಕಿಂಗ್ಸ್ ಯಾರು ಎಂಬುದು ಎಲ್ಲರ ಕುತೂಹಲ!

ಕಾರಣ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಸೂಪರ್ ಕಿಂಗ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪೈಪೋಟಿ ನಡೆಸಲಿವೆ. ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಸೋತಿರುವ ಕಿಂಗ್ಸ್ ಇಲೆವೆನ್ ಗೆಲುವಿನ ಹಾದಿಗೆ ಹಿಂದಿರುಗಲು ಕಠಿಣ ಪ್ರಯತ್ನ ಹಾಕುತ್ತಿದೆ.

ಆದರೆ ಎಂ.ಎಸ್.ದೋನಿ ಸಾರಥ್ಯದ ಸೂಪರ್ ಕಿಂಗ್ಸ್ ಬಳಗವನ್ನು ಅವರ ತವರಿನಲ್ಲೇ ಮಣಿಸುವುದು ಸವಾಲಿನ ವಿಷಯ ಎಂಬುದು ಕಿಂಗ್ಸ್ ಇಲೆವೆನ್ ಆಟಗಾರರಿಗೆ ಗೊತ್ತಿದೆ. ಸೂಪರ್ ಕಿಂಗ್ಸ್ ಆಟಗಾರರು ಹೇಳಿಕೊಳ್ಳುವಂಥ ಫಾರ್ಮ್‌ನಲ್ಲೇನಿಲ್ಲ. ಆದರೆ 9 ಪಾಯಿಂಟ್ ಹೊಂದಿರುವ ಈ ತಂಡ ಎದುರಾಳಿಯನ್ನು ಮಣಿಸುವ ವಿಶ್ವಾಸದಲ್ಲಿದೆ. ಕಿಂಗ್ಸ್ ಇಲೆವೆನ್ ಕೇವಲ 6 ಪಾಯಿಂಟ್ ಹೊಂದಿದೆ.

ಪಂದ್ಯದ ಆರಂಭ: ಸಂಜೆ 4.00ಕ್ಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.