ADVERTISEMENT

ಕುಮಾರ್‌, ಆಶ್ರಿತಾಗೆ ಸಿಂಗಲ್ಸ್‌ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 19:30 IST
Last Updated 4 ಮಾರ್ಚ್ 2014, 19:30 IST

ಬೆಂಗಳೂರು: ಕವನ್‌ ಎಸ್‌.ಕುಮಾರ್‌ ಹಾಗೂ ಆಶ್ರಿತಾ ನಾಗಪಾಲ್‌ ಇಲ್ಲಿ ಕೊನೆಗೊಂಡ ಎಐಟಿಎ ಟ್ಯಾಲೆಂಟ್‌ ಸೀರಿಸ್‌ ಟೆನಿಸ್‌್ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗದ ಸಿಂಗಲ್ಸ್‌ನಲ್ಲಿ ಚಾಂಪಿಯನ್‌ ಆಗಿದ್ದಾರೆ.

ಮಂಗಳವಾರ ನಡೆದ ಬಾಲಕರ ವಿಭಾಗದ ಫೈನಲ್‌  ಹಣಾಹಣಿಯಲ್ಲಿ ಕುಮಾರ್‌ 6–2, 6–1ರಲ್ಲಿ ಸಂಜಿತ್‌ ದೇವಿನೇನಿ ಅವರನ್ನು ಮಣಿಸಿದರು.
ಬಾಲಕಿಯರ ವಿಭಾಗದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ  ಆಶ್ರಿತಾ 6–2, 6–1ರಲ್ಲಿ ಎಸ್‌.ಬಿ. ಅಪೂರ್ವ ಅವರನ್ನು ಪರಾಭವಗೊಳಿಸಿ  ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.