ADVERTISEMENT

ಕೆವಿಎಲ್‌: ಬಿಎಸ್‌ಎನ್‌ಎಲ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2014, 19:30 IST
Last Updated 12 ಮಾರ್ಚ್ 2014, 19:30 IST

ಬೆಂಗಳೂರು: ಬಿಎಸ್‌ಎನ್‌ಎಲ್‌ ತಂಡ ರಾಜ್ಯ ವಾಲಿಬಾಲ್‌ ಸಂಸ್ಥೆ ಹಾಗೂ ಹೊಯ್ಸಳ ಯೂತ್‌್‌ ಸ್ಪೋರ್ಟ್ಸ್‌ ಆಶ್ರಯದಲ್ಲಿ ನಡೆಯುತ್ತಿರುವ ಕರ್ನಾಟಕ ವಾಲಿಬಾಲ್‌ ಲೀಗ್‌ನ (ಕೆವಿಎಲ್‌) ನಾಲ್ಕನೇ ಹಂತದ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿತು.

ಕುಮಾರಸ್ವಾಮಿ ಬಡಾವಣೆಯ ಹೊಯ್ಸಳ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ  ಮೂರನೇ ಹಂತದಲ್ಲಿ ಚಾಂಪಿಯನ್‌ ಆಗಿದ್ದ ಬಿಎಸ್‌ಎನ್‌ಎಲ್‌ 3–2 (21-25, 25-14, 14-25, 25-23 15-10) ಸೆಟ್‌ಗಳಿಂದ ಕೆವಿಸಿ ಎದುರು ಗೆಲುವು ಸಾಧಿಸಿತು.

ಜೆಎಸ್‌ಡಬ್ಲ್ಯುಗೆ ಜಯ: ದಿನದ ಇನ್ನೊಂದು ಪಂದ್ಯದಲ್ಲಿ ಜೆಎಸ್‌ಡಬ್ಲ್ಯು ತಂಡ 25-23, 23-25, 25-21, 25-21 (3–1) ಸೆಟ್‌ಗಳಿಂದ ಪೋಸ್ಟಲ್‌ ಎದುರು ಗೆಲುವು ಸಾಧಿಸಿತು. 90 ನಿಮಿಷ ನಡೆದ ಪಂದ್ಯದಲ್ಲಿ ಶ್ರೇಯಸ್‌, ಸೇಂಥಿಲ್‌ ಮತ್ತು ಜೀವನ್‌ ಉತ್ತಮ ಪ್ರದರ್ಶನ ತೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.