ADVERTISEMENT

ಕೆವಿನ್‌ಗೆ ಐಪಿಎಲ್‌ನಲ್ಲಿ ಆಡುವ ಬಯಕೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2011, 18:30 IST
Last Updated 6 ಮಾರ್ಚ್ 2011, 18:30 IST

ಬೆಂಗಳೂರು: ವಿಶ್ವ ಕಪ್ ಕ್ರಿಕೆಟ್‌ನ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವೇಗದ ಶತಕ ಗಳಿಸಿದ ಐರ್ಲೆಂಡ್ ತಂಡದ ಕೆವಿನ್ ಒಬ್ರಿಯನ್ ಇಂಡಿಯನ್ ಪ್ರೀಮಿಯರ್ ಲೀಗ್‌ನ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ಆಡುವ ಬಯಕೆ ಹೊಂದಿದ್ದಾರೆ.

‘ವೇಗದ ಬ್ಯಾಟಿಂಗ್ ಮಾಡುವ ನಿಮಗೆ ಐಪಿಎಲ್ ಸೂಕ್ತವಾದ ಆಟ. ಆದ್ದರಿಂದಲೇ ಐಪಿಎಲ್‌ನತ್ತ ಗಮನ ಹರಿಸಬೇಕು’ ಎಂದು ಸಾಕಷ್ಟು  ಅಭಿಮಾನಿಗಳು ನನಗೆ ಹೇಳಿದ್ದಾರೆ. ಆದ್ದರಿಂದ ಐಪಿಎಲ್‌ನಲ್ಲಿ ಆಡುವ ಬಯಕೆ ಹೊಂದಿದ್ದಾಗಿ ಕೆವಿನ್ ತಿಳಿಸಿದ್ದಾರೆ.

ಬುಧವಾರ ಬೆಂಗಳೂರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೇವಲ 50 ಎಸೆತಗಳಲ್ಲಿ ಕೆವಿನ್ ಶತಕ ಗಳಿಸಿ ತಂಡಕ್ಕೆ ಅಚ್ಚರಿಯ ಗೆಲುವು ನೀಡಿದ್ದರು. ‘ಈ ಶತಕ ನನ್ನ ಕ್ರಿಕೆಟ್ ಜೀವನದಲ್ಲಿ ಮಹತ್ವದ ಸಾಧನೆಯ ಮೈಲಿಗಲ್ಲು’ ಎಂದು ಕೆವಿನ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.