ADVERTISEMENT

ಕೊಕ್ಕೊ: ಹುಬ್ಬಳ್ಳಿಯ ಕಿಮ್ಸ ಕಾಲೇಜಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2011, 18:40 IST
Last Updated 11 ಸೆಪ್ಟೆಂಬರ್ 2011, 18:40 IST

ಚಿತ್ರದುರ್ಗ: ಹುಬ್ಬಳ್ಳಿಯ ಕಿಮ್ಸ ಕಾಲೇಜು ತಂಡದವರು ಇಲ್ಲಿ ಮುಕ್ತಾಯವಾದ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಮಟ್ಟದ ಕೊಕ್ಕೊ ಟೂರ್ನಿಯ ಪುರುಷರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು. 

ನಗರದ ಎಸ್‌ಜೆಎಂ ದಂತ ಮಹಾವಿದ್ಯಾಲಯ ಆಶ್ರಯದಲ್ಲಿ ನಗರದ ಹಳೇ ಮಾಧ್ಯಮಿಕ ಶಾಲಾ ಅವರಣದಲ್ಲಿ ಶನಿವಾರ ಮತ್ತು ಭಾನುವಾರ ಪಂದ್ಯಗಳು ನಡೆದವು.

ಪುರುಷರ ವಿಭಾಗದ ಅಂತಿಮ ಪಂದ್ಯದಲ್ಲಿ ಹುಬ್ಬಳಿಯ ಕಿಮ್ಸ ಕಾಲೇಜು ತಂಡ 10-9 ಪಾಯಿಂಟ್‌ಗಳಿಂದ ದಾವಣಗೆರೆಯ ಜೆಜೆಎಂ ಕಾಲೇಜಿನ ತಂಡವನ್ನು ಮಣಿಸಿ ಒಂದು ಪಾಯಿಂಟ್‌ನಿಂದ ರೋಚಕ ಗೆಲುವು ಸಾಧಿಸಿತು.

ಡಿಜಿಎಂಎಎ ಕಾಲೇಜು ತಂಡ ಚಾಂಪಿಯನ್: ಇದೇ ಟೂರ್ನಿಯ ಮಹಿಳೆಯರ ವಿಭಾಗದಲ್ಲಿ ಗದಗ ಡಿಜಿಎಂಎಎ ಕಾಲೇಜು ತಂಡ 9-6 ಪಾಯಿಂಟ್‌ಗಳಿಂದ ದಾವಣಗೆರೆ ಎಸ್‌ಎಸ್‌ಎಲ್‌ಎಂ ಕಾಲೇಜು ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು.

ನಂತರ ನಡೆದ ಸಮಾರಂಭದಲ್ಲಿ ಎಸ್‌ಜೆಎಂ ದಂತ ಮಹಾವಿದ್ಯಾಲಯದ ಪ್ರಾಚಾರ್ಯರಾದ ಆರ್. ಗೌರಮ್ಮ ಪ್ರಶಸ್ತಿ ವಿತರಿಸಿದರು. ಡಾ.ರಘುನಾಥ್ ರೆಡ್ಡಿ, ಪೂಜಾರ್, ಕುಮಾರಸ್ವಾಮಿ, ಎಸ್.ಕೆ. ಹರ್ತಿ ಉಪಸ್ಥಿತರಿದ್ದರು. ಬಿ.ಜಿ. ನಾಗರಾಜ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.