ADVERTISEMENT

ಕೊಡವ ಹಾಕಿ: ಕುಲ್ಲೇಟಿರ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 8 ಮೇ 2018, 19:30 IST
Last Updated 8 ಮೇ 2018, 19:30 IST

ನಾಪೋಕ್ಲು: ಆತಿಥೇಯ ಕುಲ್ಲೇಟಿರ ತಂಡವು ಇಲ್ಲಿನ ಜನರಲ್‌ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ಹಾಕಿ ಉತ್ಸ
ವದಲ್ಲಿ ಮಂಗಳಾರ ಮದ್ರೀರ ತಂಡವನ್ನು 3–0 ಅಂತರದಲ್ಲಿ ಸೋಲಿಸಿತು.

ಕುಲ್ಲೇಟಿರ ತಂಡದ ನಂದಾ ನಾಚಪ್ಪ, ಶುಭಂ, ಯತೀನ್ ಒಂದೊಂದು ಗೋಲು ದಾಖಲಿಸಿದರು. ಅನ್ನಾಡಿ ಯಂಡ ತಂಡವು ತಿರುತೆರ ತಂಡವನ್ನು 3–1 ಗೋಲುಗಳ ಅಂತರದಿಂದ ಮಣಿಸಿತು. ಬಾಚಿರ ತಂಡದ ವಿರುದ್ಧ ಮಂಡೇ ಪಂಡ (4–0) ತಂಡವು ಭರ್ಜರಿ ಜಯ ಗಳಿಸಿತು.

ಕೂತಂಡ ತಂಡವು ಕಂಗಾಂಡದ ವಿರುದ್ಧ 3–1 ಅಂತರದಲ್ಲಿ ಜಯಿಸಿತು. ಪೆಮ್ಮಂಡ ತಂಡವು ಮಾಚಿಮಾಡ ತಂಡದ ವಿರುದ್ಧ (3–1) ಜಯ ಗಳಿಸಿತು.

ADVERTISEMENT

ಬಾಳೆಯಡ ತಂಡವು ಪುಲಿಯಂಡ ತಂಡದ ವಿರುದ್ಧ 2–0 ಅಂತರದಲ್ಲಿ ಗೆಲುವು ಸಾಧಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.