ADVERTISEMENT

ಕೊಡವ ಹಾಕಿ: ಚೇಂದಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 14 ಮೇ 2018, 20:19 IST
Last Updated 14 ಮೇ 2018, 20:19 IST

ಮಡಿಕೇರಿ: ಚೇಂದಂಡ ತಂಡ, ನಾಪೋಕ್ಲು ಜನರಲ್‌ ಕೆ.ಎಸ್‌. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ‘ಕುಲ್ಲೇಟಿರ ಹಾಕಿ ಉತ್ಸವ’ದಲ್ಲಿ ಕುಪ್ಪಂಡ (ಕೈಕೇರಿ) ವಿರುದ್ಧ 4–0 ಅಂತರದಲ್ಲಿ ಜಯ ಗಳಿಸಿತು.

ಚುರುಕಿನ ಆಟ ಆಡಿದ ಚೇಂದಂಡದ ಮೋಕ್ಷಿತ್ ಮತ್ತು ಬೋಪಣ್ಣ ತಲಾ ಎರಡು ಗೋಲು ಗಳಿಸಿದರು. ಚೆಪ್ಪುಡಿರ ತಂಡವು ಐನಂಡ ತಂಡವನ್ನು 2–1ರಲ್ಲಿ ಸೋಲಿಸಿತು. ಸೋಮಯಂಡ ತಂಡವು ಬಾಳೆಯಂಡ ತಂಡವನ್ನು 1–0 ಗೋಲಿನಿಂದ ಮಣಿಸಿತು.

ಪೆಮ್ಮಂಡದ ವಿರುದ್ಧ ಕೂತಂಡ ತಂಡ 2–0ಯಿಂದ ಗೆದ್ದಿತು. ಆತಿಥೇಯ ಕುಲ್ಲೇಟಿರ ತಂಡವು ಮೆಕೇರಿರ ತಂಡವನ್ನು 5–2ರಲ್ಲಿ ಸೋಲಿಸಿತು. ಕುಲ್ಲೇಟಿರ ಪರವಾಗಿ ಯತಿನ್, ಶುಭಂ ಚೆಟ್ಟಿಯಪ್ಪ, ನಂದಾ, ಯಾಶಿಕ್, ನಾಚಪ್ಪ ಗೋಲಿನ ಕಾಣಿಕೆ ನೀಡಿದರು. ಮಂಡೇಪಂಡ ತಂಡ ಸುಳ್ಳಿಮಾಡದ ವಿರುದ್ಧ 5–0ಯಿಂದ ಗೆಲುವು ಸಾಧಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.