ADVERTISEMENT

ಕೊಹ್ಲಿ ಕೌಂಟಿಯಲ್ಲಿ ಆಡುವುದನ್ನು ನೋಡಲು ಉತ್ಸುಕನಾಗಿದ್ದೇನೆ: ವೋಕ್ಸ್

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2018, 19:30 IST
Last Updated 19 ಏಪ್ರಿಲ್ 2018, 19:30 IST
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಆರ್‌ಸಿಬಿ ತಂಡದ ಮೋಯಿನ್‌ ಅಲಿ ಹಾಗೂ ಬ್ರೆಂಡಮ್‌ ಮೆಕ್ಲಮ್‌ ಅಭ್ಯಾಸದ ಬಿಡುವಿನಲ್ಲಿ ಸಹ ಆಟಗಾರರೊಂದಿಗೆ ಮಾತುಕತೆ ನಡೆಸಿದರು. –ಪ್ರಜಾವಾಣಿ ಚಿತ್ರಗಳು/ಕೃಷ್ಣಕುಮಾರ್‌ ಪಿ.ಎಸ್‌.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಆರ್‌ಸಿಬಿ ತಂಡದ ಮೋಯಿನ್‌ ಅಲಿ ಹಾಗೂ ಬ್ರೆಂಡಮ್‌ ಮೆಕ್ಲಮ್‌ ಅಭ್ಯಾಸದ ಬಿಡುವಿನಲ್ಲಿ ಸಹ ಆಟಗಾರರೊಂದಿಗೆ ಮಾತುಕತೆ ನಡೆಸಿದರು. –ಪ್ರಜಾವಾಣಿ ಚಿತ್ರಗಳು/ಕೃಷ್ಣಕುಮಾರ್‌ ಪಿ.ಎಸ್‌.   

ಬೆಂಗಳೂರು: ವಿರಾಟ್ ಕೊಹ್ಲಿ ಅವರು ಜೂನ್‌ ತಿಂಗಳಲ್ಲಿ ಇಂಗ್ಲಿಷ್‌ ಕೌಂಟಿಯಲ್ಲಿ ಮೊದಲ ಬಾರಿಗೆ ಆಡುವುದನ್ನು ನೋಡಲು ಉತ್ಸುಕನಾಗಿದ್ದೇನೆ ಎಂದು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಬೌಲರ್ ಕ್ರಿಸ್ ವೋಕ್ಸ್‌ ಹೇಳಿದರು.

ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಕೌಂಟಿ ಕ್ರಿಕೆಟ್‌ನಲ್ಲಿ ಆಡಲು ಭಾರತದ ಆಟಗಾರರಿಗೆ ಅವಕಾಶ ನೀಡುತ್ತಿರುವುದು ಸ್ವಾಗತಾರ್ಹ. ಈಗಾಗಲೇ ಇಶಾಂತ್ ಶರ್ಮಾ, ಚೇತೇಶ್ವರ್ ಪೂಜಾರ ಆಲ್ಲಿ ಆಡುತ್ತಿದ್ದಾರೆ. ವಿದೇಶದ ಉತ್ತಮ ಆಟಗಾರರಿಗೆ ಕೌಂಟಿಯಲ್ಲಿ ಆಡಿಸುವುದು ತಪ್ಪೇನಲ್ಲ’ ಎಂದರು.

ADVERTISEMENT

‘ವಿರಾಟ್ ಕೊಹ್ಲಿ ಅವರನ್ನು ಕೌಂಟಿಯಲ್ಲಿ ಆಡಿಸುವುದು ಬೇಡ. ಅದರಿಂದ ಕೊಹ್ಲಿ ಇಂಗ್ಲೆಂಡ್ ನೆಲದಲ್ಲಿ ಮತ್ತು ಇಲ್ಲಿಯ ಆಟಗಾರರನ್ನು ಅರಿತುಕೊಳ್ಳಲು ಅವಕಾಶ ನೀಡಿದಂತಾಗುತ್ತದೆ. ಇದು ಅಪಾಯಕಾರಿ’ ಎಂದು ಇಂಗ್ಲೆಂಡ್‌ನ ಹಿರಿಯ ಕ್ರಿಕೆಟಿಗ ಬಾಬ್ ವಿಲ್ಲಿಸ್ ಹೇಳಿದ್ದರು.

ಈ ಟೂರ್ನಿಯಲ್ಲಿ ಆರ್‌ಸಿಬಿಯು ಆಡಿರುವ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಸೋತಿರುವುದರ ಕುರಿತು ಪ್ರತಿಕ್ರಿಯಿಸಿದ ವೋಕ್ಸ್, ‘ಇನ್ನೂ ಸಾಗಬೇಕಾದ ಹಾದಿ ದೂರ ಇದೆ. ಗೆಲುವು ಸಾಧಿಸುವ ಸಾಮರ್ಥ್ಯ ತಂಡಕ್ಕೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.