ADVERTISEMENT

ಕೊಹ್ಲಿ ಗರ್ಜನೆಗೆ ಪಾಕಿಸ್ತಾನ ಚಿತ್!

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2012, 19:15 IST
Last Updated 18 ಮಾರ್ಚ್ 2012, 19:15 IST

ಮೀರ್‌ಪುರ (ಪಿಟಿಐ): `ಶೇರ್ ಎ ಬಾಂಗ್ಲಾ~ ಕ್ರೀಡಾಂಗಣದಲ್ಲಿ ಭಾನುವಾರ ವಿರಾಟ್ ಕೊಹ್ಲಿ ಅಕ್ಷರಶಃ ಗರ್ಜಿಸಿದರು. ಈ ಗರ್ಜನೆಗೆ ಚಿತ್ ಆಗಿದ್ದು ಪಾಕಿಸ್ತಾನ.

ಸಚಿನ್ (52) ಹಾಗೂ ಕೊಹ್ಲಿ ಆಡಿದ ರೀತಿ ಪಾಕ್ ಪಾಲಿಗೆ ಮುಳ್ಳಾಗಿ ಪರಿಣಮಿಸಿತು. ಸಚಿನ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗ ಕೊಹ್ಲಿ ಒಂದು ವರ್ಷದ ಮಗು! ಆದರೆ ಸಚಿನ್ ಅವರನ್ನು ಮೀರಿಸುವ ಇನಿಂಗ್ಸ್ ಕಟ್ಟಿದರು.

ಪರಿಣಾಮ ಏಷ್ಯಾಕಪ್ ಟೂರ್ನಿಯ ಈ ಪಂದ್ಯದಲ್ಲಿ ಪಾಕ್ ನೀಡಿದ 330 ರನ್‌ಗಳ ಗುರಿಯನ್ನು ದೋನಿ ಬಳಗ 47.5 ಓವರ್‌ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ತಲುಪಿತು. `ಬದ್ಧ ಎದುರಾಳಿ~ಯಾದ ಪಾಕ್ ವಿರುದ್ಧದ ಈ `ಹೈವೋಲ್ಟೇಜ್~ ಪಂದ್ಯದಲ್ಲಿ ಬಂದ ಜಯ ಭಾರತದ ಅಭಿಮಾನಗಳ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು.    ಮೂಲಕ ಟೂರ್ನಿಯ ಫೈನಲ್ ತಲುಪುವ ಭಾರತದ ಆಸೆ ಜೀವಂತವಾಗಿದೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.