ADVERTISEMENT

ಕ್ರಿಕೆಟಿಗರಿಗೆ ‘ಗೌರವ ಸಂಹಿತೆ’: ಐಸಿಸಿ

ಪಿಟಿಐ
Published 30 ಮೇ 2018, 19:30 IST
Last Updated 30 ಮೇ 2018, 19:30 IST
ಅನಿಲ್ ಕುಂಬ್ಳೆ (ಬಲ)
ಅನಿಲ್ ಕುಂಬ್ಳೆ (ಬಲ)   

ಮುಂಬೈ: ಕ್ರಿಕೆಟ್ ಆಟಗಾರರ ನಡವಳಿಕೆ ಉತ್ತಮಪಡಿಸಲು ಮತ್ತು ಪರಸ್ಪರ ಗೌರವಿಸುವ ಸಂಸ್ಕೃತಿಯನ್ನು ಬೆಳೆಸಲು ‘ಗೌರವ ಸಂಹಿತೆ’ ಜಾರಿಗೆ ತರಲು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸಿದ್ಧವಾಗಿದೆ.

ಮಂಗಳವಾರ ಇಲ್ಲಿ ನಡೆದ ಐಸಿಸಿ ಕ್ರಿಕೆಟ್ ಸಮಿತಿ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಮಿತಿ ಮುಖ್ಯಸ್ಥ ಅನಿಲ್ ಕುಂಬ್ಳೆ ಈ ವಿಷಯವನ್ನು ವಿಸ್ಡನ್‌ ಇಂಡಿಯಾ ಡಾಟ್ ಕಾಮ್‌ ವೆಬ್‌ಸೈಟ್‌ಗೆ ತಿಳಿಸಿದ್ದಾರೆ.

‘‌ಆಡುವ ಎರಡು ತಂಡಗಳ ನಡುವಣ ಗೌರವಯುತ ನಡವಳಿಕೆ ಮತ್ತು ಸಹನೀಯ ವಾತಾವರಣ ನಿರ್ಮಿ ಸುವ ಕುರಿತು ಚರ್ಚೆ ನಡೆಸಲಾಯಿತು. ಆಟದ ಅಂಗಳದಲ್ಲಿ ಸಭ್ಯ ಹಾಗೂ ಶಿಸ್ತು ಇರವಂತೆ ಕ್ರಮ ಕೈಗೊಳ್ಳಲು ಆದ್ಯತೆ ನೀಡಲಾಗುವುದು’ ಎಂದರು.

ADVERTISEMENT

ಶಿಫಾರಸು ಮಾಡಲಾದ ಪ್ರಮುಖ ಅಂಶಗಳು:
* ಪಂದ್ಯದ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡುವುದು.
* ಮಂಡಳಿಗಳಿಗೆ ಮತ್ತು ತಂಡಗಳ ನೆರವು ಸಿಬ್ಬಂದಿಗೆ ನಾಯಕತ್ವ ಮತ್ತು ಉತ್ತರದಾಯಿತ್ವ ಹೆಚ್ಚಿಸುವುದು.
* ಪ್ರವಾಸಿ ತಂಡಗಳಿಗೆ ಸೂಕ್ತ ಭದ್ರತೆ, ಪೂರ್ವ ಅಭ್ಯಾಸದ ವ್ಯವಸ್ಥೆಗಳು, ಪ್ರಯಾಣ ಮತ್ತು ವಸತಿ ವ್ಯವಸ್ಥೆಗಳನ್ನು ಒದಗಿಸುವುದು.
* ಚೆಂಡು ವಿರೂಪಗೊಳಿಸುವ ಆರೋಪಿಗಳಿಗೆ ಶಿಕ್ಷೆಯ ಪ್ರಮಾಣ ಹೆಚ್ಚಿಸುವುದು.
* ನಿಯಮಗಳನ್ನು ಉಲ್ಲಂಘಿಸುವ, ಹೊಸ ರೀತಿಯ ಅಪರಾಧಗಳನ್ನು ಮಾಡುವ, ಪ್ರತಿಸ್ಪರ್ಧಿಗಳನ್ನು ವೈಯಕ್ತಿಕವಾಗಿ ನಿಂದಿಸುವ, ಅವಮಾನಿಸುವವರನ್ನು ಶಿಕ್ಷೆಗೆ ಒಳ ಪಡಿಸಲು ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸುವುದು.
* ಆಟಗಾರರು ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿ ವರ್ತಿಸುವ ಮತ್ತು ನಿಯ ಮ ಉಲ್ಲಂಘನೆ ಮಾಡಿದಾಗ ವಿಚಾರಣೆ ಮತ್ತು ಶಿಕ್ಷೆ ನಿಗದಿಪಡಿಸಲು ಸಂಪೂರ್ಣ ಅಧಿಕಾರ ಇರುವ ಪಂದ್ಯ ರೆಫರಿಯ ನೇಮಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.