ಕೊಲಂಬೊ (ಎಎಫ್‌ಪಿ): ಕೌಶಲ್ ಸಿಲ್ವ (115; 269ಎ, 10ಬೌಂ) ಅವರ ಶತಕದ ಬಲದಿಂದ ಶ್ರೀಲಂಕಾ ತಂಡ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮುನ್ನಡೆಯತ್ತ ಸಾಗಿದೆ.
ಒಂದು ವಿಕೆಟ್‌ಗೆ 22ರನ್ ಗಳಿಂದ ಮಂಗಳ ವಾರ ಆಟ ಮುಂದುವರಿಸಿದ ಲಂಕಾ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ ದಿನ ದಾಟದ ಅಂತ್ಯಕ್ಕೆ 95 ಓವರ್‌ಗಳಲ್ಲಿ 8 ವಿಕೆಟ್‌ಗೆ 312ರನ್ ಗಳಿಸಿದೆ. ಇದ ರೊಂದಿಗೆ 288ರನ್‌ಗಳ ಮುನ್ನಡೆ ಪಡೆದಿದೆ. ಮಂಗಳವಾರ ಬ್ಯಾಟಿಂಗ್ ಆರಂಭಿಸಿದ ಲಂಕಾ ಬೇಗನೆ ವಿಕೆಟ್ ಕಳೆದುಕೊಂಡಿತ್ತು. ಆದರೆ ಸಿಲ್ವ ಆಸರೆಯಾದರು.
ಸೋಮವಾರ ಕ್ಷೇತ್ರ ರಕ್ಷಣೆಯ ವೇಳೆ ಅವರ ಎಡಗೈನ ಕಿರು ಬೆರಳಿಗೆ ಗಾಯವಾಗಿತ್ತು. ಹೀಗಾಗಿ ಬೆರಳಿಗೆ ಆರು ಹೊಲಿಗೆ ಹಾಕಲಾಗಿತ್ತು. ಇದರ ನಡುವೆಯೂ ಅವರು ಛಲದಿಂದ ಆಡಿ ಟೆಸ್ಟ್‌ನಲ್ಲಿ ಮೂರನೇ ಶತಕ ಸಿಡಿಸಿದರು.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ: ಮೊದಲ ಇನಿಂಗ್ಸ್: 141.1 ಓವರ್‌ಗಳಲ್ಲಿ 355 ಮತ್ತು 95 ಓವರ್‌ಗಳಲ್ಲಿ 8 ವಿಕೆಟ್‌ಗೆ 312 (ಕೌಶಲ್ ಸಿಲ್ವ 115, ಕುಶಾಲ್ ಪೆರೇರಾ 24, ದಿನೇಶ್ ಚಾಂಡಿಮಲ್ 43, ಧನಂಜಯ ಡಿ ಸಿಲ್ವ ಬ್ಯಾಟಿಂಗ್ 44; ಮಿಷೆಲ್ ಸ್ಟಾರ್ಕ್ 58ಕ್ಕೆ2, ನಥಾನ್ ಲಿಯೊನ್ 123ಕ್ಕೆ4, ಜಾನ್ ಹಾಲಂಡ್ 72ಕ್ಕೆ2). ಆಸ್ಟ್ರೇಲಿಯಾ: ಪ್ರಥಮ ಇನಿಂಗ್ಸ್: 125.1 ಓವರ್‌ಗಳಲ್ಲಿ 379.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.