ADVERTISEMENT

ಕ್ರಿಕೆಟ್‌: ಬಾಂಗ್ಲಾದೇಶಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 15 ಜನವರಿ 2016, 19:31 IST
Last Updated 15 ಜನವರಿ 2016, 19:31 IST
ಕ್ರಿಕೆಟ್‌: ಬಾಂಗ್ಲಾದೇಶಕ್ಕೆ ಜಯ
ಕ್ರಿಕೆಟ್‌: ಬಾಂಗ್ಲಾದೇಶಕ್ಕೆ ಜಯ   

ಖುಲ್ನಾ (ಎಎಫ್‌ಪಿ): ಶಬ್ಬೀರ್‌ ರಹಮಾನ್‌ (46; 36ಎ, 4ಬೌಂ, 1ಸಿ) ಆಕರ್ಷಕ ಬ್ಯಾಟಿಂಗ್‌ ಮತ್ತು      ಮುಸ್ತಫಿಜುರ್‌ ರಹಮಾನ್‌ (18ಕ್ಕೆ2) ಬಿಗುವಿನ ದಾಳಿಯ ಸಹಾಯದಿಂದ ಬಾಂಗ್ಲಾದೇಶ ತಂಡ ಮೊದಲ ಟ್ವೆಂಟಿ–20 ಕ್ರಿಕೆಟ್‌ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳಿಂದ ಜಿಂಬಾಬ್ವೆ ತಂಡವನ್ನು ಮಣಿಸಿದೆ. ಇದರಿಂದ ನಾಲ್ಕು ಪಂದ್ಯಗಳ ಸರಣಿಯಲ್ಲಿ 1–0ರ ಮುನ್ನಡೆ ತನ್ನದಾಗಿಸಿಕೊಂಡಿದೆ.

ಶೇಖ್್ ಅಬು ನಸೇರ್‌ ಕ್ರೀಡಾಂಗಣ ದಲ್ಲಿ ಶುಕ್ರವಾರ ಟಾಸ್‌ ಗೆದ್ದು ಬ್ಯಾಟಿಂಗ್‌ ಮಾಡಿದ ಜಿಂಬಾಬ್ವೆ ತಂಡ ಹ್ಯಾಮಿಲ್ಟನ್‌ ಮಸಕಜ (79; 53ಎ, 9ಬೌಂ, 2ಸಿ) ಮತ್ತು ವುಸಿ ಸಿಬಾಂಡ (46; 39ಎ, 4ಬೌಂ, 2ಸಿ) ಅವರ ಮಿಂಚಿನ ಆಟದಿಂದಾಗಿ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 163ರನ್‌ ಗಳಿಸಿತು. ಬಾಂಗ್ಲಾ ತಂಡ 18.4 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು ಗುರಿ ಸೇರಿತು.
ಸಂಕ್ಷಿಪ್ತ ಸ್ಕೋರ್‌: ಜಿಂಬಾಬ್ವೆ:  20 ಓವರ್‌ಗಳಲ್ಲಿ 7 ವಿಕೆಟ್‌ಗೆ 163 (ವುಸಿ ಸಿಬಾಂಡ 46, ಹ್ಯಾಮಿಲ್ಟನ್‌ ಮಸಕಜ 79; ಅಲ್‌ ಅಮಿನ್‌ ಹುಸೇನ್‌ 24ಕ್ಕೆ2, ಶಕಿಬ್‌ ಅಲ್‌ ಹಸನ್‌ 45ಕ್ಕೆ1, ಮುಸ್ತಫಿಜುರ್‌ ರಹಮಾನ್‌ 18ಕ್ಕೆ2).

ಬಾಂಗ್ಲಾದೇಶ:  18.4 ಓವರ್‌ಗಳಲ್ಲಿ 6 ವಿಕೆಟ್‌ಗೆ 166 (ತಮೀಮ್‌ ಇಕ್ಬಾಲ್‌ 29, ಶಬ್ಬೀರ್‌ ರಹಮಾನ್‌ 46, ಮುಷ್ಫಿಕರ್‌ ರಹೀಮ್‌  26, ಶಕಿಬ್‌ ಅಲ್‌ ಹಸನ್‌ ಔಟಾಗದೆ 20;  ಗ್ರೇಮ್‌ ಕ್ರೀಮರ್‌ 32ಕ್ಕೆ2, ಸೀನ್‌ ವಿಲಿಯಮ್ಸ್‌ 22ಕ್ಕೆ1, ವೆಲ್ಲಿಂಗ್ಟನ್‌ ಮಸಕಜ 25ಕ್ಕೆ1).
ಫಲಿತಾಂಶ:  ಬಾಂಗ್ಲಾದೇಶಕ್ಕೆ 4 ವಿಕೆಟ್‌ ಗೆಲುವು ಹಾಗೂ 4 ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ. ಪಂದ್ಯಶ್ರೇಷ್ಠ: ಹ್ಯಾಮಿಲ್ಟನ್‌ ಮಸಕಜ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.