ADVERTISEMENT

ಕ್ರಿಕೆಟ್: ಆರ್‌ವಿಸಿಇ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 19:35 IST
Last Updated 15 ಸೆಪ್ಟೆಂಬರ್ 2011, 19:35 IST

ಬೆಂಗಳೂರು: ಆರ್‌ವಿಸಿಇ ತಂಡದವರು ಇಲ್ಲಿ ನಡೆಯುತ್ತಿರುವ ಎಂಎಸ್‌ಆರ್‌ಐಟಿ ಆಶ್ರಯದ 14ನೇ ಎಂ.ಎಸ್. ರಾಮಯ್ಯ ಸ್ಮಾರಕ ಅಂತರ ಎಂಜಿನಿಯರಿಂಗ್ ಕಾಲೇಜು ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಎಎಂಸಿಇ ವಿರುದ್ಧ ಒಂದು ರನ್ನಿನ ರೋಚಕ ಗೆಲುವು ಪಡೆದರು.

ಗುರುವಾರ ನಡೆದ ಇತರ ಪಂದ್ಯಗಳಲ್ಲಿ ಬಿಎಂಎಸ್‌ಐಟಿ ಮತ್ತು ಡಿಎಸ್‌ಸಿಇ ತಂಡಗಳು ತಮ್ಮ ಎದುರಾಳಿಗಳ ವಿರುದ್ಧ ಜಯ ಸಾಧಿಸಿದವು.

ಸಂಕ್ಷಿಪ್ತ ಸ್ಕೋರ್: ಆರ್‌ವಿಸಿಇ: 30 ಓವರ್‌ಗಳಲ್ಲಿ 9 ವಿಕೆಟ್‌ಗೆ 147 (ವಿಶ್ವನಾಥ್ 25, ಪಿಯೂಷ್ 24, ತೇಜಸ್ 18ಕ್ಕೆ 5). ಎಎಂಸಿಇ: 30 ಓವರ್‌ಗಳಲ್ಲಿ 5 ವಿಕೆಟ್‌ಗೆ 146 (ಶ್ರೀನಿವಾಸ್ 53, ಸುಹಾಸ್47, ಪಿಯೂಷ್ 45ಕ್ಕೆ 3). ಫಲಿತಾಂಶ: ಆರ್‌ವಿಸಿಇಗೆ 1 ರನ್ ಜಯ

ಬಿಎಂಎಸ್‌ಐಟಿ: 30 ಓವರ್‌ಗಳಲ್ಲಿ 8 ವಿಕೆಟ್‌ಗೆ 189 (ಅರವಿಂದ್ 72, ಪ್ರದೀಪ್ 23ಕ್ಕೆ 3). ಕೆಎನ್‌ಎಸ್‌ಐಟಿ: 30 ಓವರ್‌ಗಳಲ್ಲಿ 8 ವಿಕೆಟ್‌ಗೆ 182 (ನಾಗೇಂದ್ರ 83, ವಿಷ್ಣುರಾಮ್ 20ಕ್ಕೆ 4).
ಫಲಿತಾಂಶ: ಬಿಎಂಎಸ್‌ಐಟಿಗೆ 7 ರನ್ ಗೆಲುವು

ಡಿಎಸ್‌ಸಿಇ: 30 ಓವರ್‌ಗಳಲ್ಲಿ 8 ವಿಕೆಟ್‌ಗೆ 189 (ಮಿಥುನ್ 62, ಸುಪೇಶ್ 36, ಚಂದ್ರ ಶೇಖರ್ 36ಕ್ಕೆ 4). ಕೆಎಸ್‌ಐಟಿ: 30 ಓವರ್‌ಗಳಲ್ಲಿ 7 ವಿಕೆಟ್‌ಗೆ 140 (ಬಾಲಮುರಳಿ ಔಟಾಗದೆ 38, ಶೇಖರ್ 37). ಫಲಿತಾಂಶ: ಡಿಎಸ್‌ಸಿಇಗೆ 49 ರನ್ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.