ADVERTISEMENT

ಕ್ರಿಕೆಟ್: ಒತ್ತಡದಲ್ಲಿ ಆಸ್ಟ್ರೇಲಿಯಾ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2012, 19:30 IST
Last Updated 10 ಏಪ್ರಿಲ್ 2012, 19:30 IST

ಬ್ರಿಜ್‌ಟೌನ್ (ಪಿಟಿಐ): ವೆಸ್ಟ್ ಇಂಡೀಸ್ ಬೌಲರ್‌ಗಳ ಎದುರು ನಿರಾತಂಕವಾಗಿ ಬ್ಯಾಟ್ ಬೀಸಲು ಪರದಾಡಿದ ಆಸ್ಟ್ರೇಲಿಯಾ ತಂಡದವರು ಪ್ರಥಮ ಟೆಸ್ಟ್‌ನ ಮೊದಲ ಇನಿಂಗ್ಸ್ ನಲ್ಲಿಯೇ ಒತ್ತಡದಲ್ಲಿ ಸಿಲುಕಿದ್ದಾರೆ.

ಎರಡನೇ ದಿನದಾಟದ ಅಂತ್ಯಕ್ಕೆ 9.5 ಓವರುಗಳಲ್ಲಿ ವಿಕೆಟ್ ನಷ್ಟವಿಲ್ಲದೆ 44 ರನ್‌ಗಳನ್ನು ಕಲೆಹಾಕಿದ್ದ ಆಸ್ಟ್ರೇಲಿಯಾ ಮಂದಗತಿಯಲ್ಲಿಯೇ ಮುಂದೆ ಸಾಗಿತು. ವಿಂಡೀಸ್ ನೀಡಿದ 449 ರನ್‌ಗಳ ಮೊದಲ ಇನಿಂಗ್ಸ್ ಸವಾಲಿಗೆ ಉತ್ತರವಾಗಿ ಟೆಸ್ಟ್‌ನ ಮೂರನೇ ದಿನವಾದ ಸೋಮವಾರದ ಆಟಕ್ಕೆ ತೆರೆ ಬೀಳುವ ಹೊತ್ತಿಗೆ ಕಾಂಗರೂಗಳ ನಾಡಿನವರು ಗಳಿಸಿದ್ದು ಐದು ವಿಕೆಟ್‌ಗಳ ನಷ್ಟಕ್ಕೆ 248 ರನ್. ಇನ್ನೂ 201 ರನ್ ಗಳಿಸಿದರೆ ಇನಿಂಗ್ಸ್ ಹಿನ್ನಡೆಯ ಅಪಾಯ ತಪ್ಪುತ್ತದೆ.

ಸ್ಕೋರ್: ವೆಸ್ಟ್ ಇಂಡೀಸ್: ಪ್ರಥಮ ಇನಿಂಗ್ಸ್ 153 ಓವರುಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 449 ಡಿಕ್ಲೇರ್ಡ್‌; ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್ 95 ಓವರುಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 248 (ಎಡ್ ಕೋವನ್ 14, ಡೇವಿಡ್ ವಾರ್ನರ್ 42, ಶೇನ್ ವ್ಯಾಟ್ಸನ್ 39, ರಿಕಿ ಪಾಂಟಿಂಗ್ 4, ಮೈಕಲ್ ಕ್ಲಾರ್ಕ್ 73, ಮೈಕಲ್ ಹಸ್ಸಿ ಬ್ಯಾಟಿಂಗ್ 47, ಮ್ಯಾಥ್ಯೂ ವೇಡ್ ಬ್ಯಾಟಿಂಗ್ 19; ಕೆಮರ್ ರೋಷ್ 56ಕ್ಕೆ1, ದೇವೇಂದ್ರ ಬಿಶೋ 77ಕ್ಕೆ1, ಡರೆನ್ ಸಾಮಿ 33ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.