
ಪ್ರಜಾವಾಣಿ ವಾರ್ತೆಬೆಂಗಳೂರು: ಜಿಎಟಿ, ಎಸ್‌ಬಿಎಂಜೆಸಿಇ, ಆರ್‌ಐಟಿಎಂ ಕಾಲೇಜ್ ತಂಡದವರು ಎಂ.ಎಸ್. ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯ ಆಶ್ರಯದ ಹದಿನಾಲ್ಕನೇ ವಾರ್ಷಿಕ ಡಾ. ಎಂ.ಎಸ್. ರಾಮಯ್ಯ ಸ್ಮಾರಕ ರಾಜ್ಯಮಟ್ಟದ ಅಂತರ ಎಂಜಿನಿಯರಿಂಗ್ ಕಾಲೇಜ್ ಕ್ರಿಕೆಟ್ ಟೂರ್ನಿ ಮೊದಲ ಸುತ್ತಿನ ಪಂದ್ಯದಲ್ಲಿ ಜಯಗಳಿಸಿ ಮುನ್ನಡೆದಿದ್ದಾರೆ.
ಐಐಎಸ್‌ಸಿ ಮೈದಾನದಲ್ಲಿ ಬುಧವಾರ ನಡೆದ ಟೂರ್ನಿ ಉದ್ಘಾಟನಾ ಪಂದ್ಯದಲ್ಲಿ ಮನೀಶ್ ವರ ಆಲ್‌ರೌಂಡ್ ಆಟದ ನೆರವಿನಂದ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ (ಜಿಎಟಿ) ತಂಡದವರು ಅಮೃತಾ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಹಾಗೂ ಮ್ಯಾನೇಜ್‌ಮೆಂಟ್ ಸೈನ್ಸಸ್ ಮೇಲೆ 64 ರನ್ ಜಯ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.