ಬಲಾವಯೊ: ಆಫ್ ಸ್ಪಿನ್ನರ್ ಮೊಹಮ್ಮದ್ ಹಫೀಜ್ (31ಕ್ಕೆ4) ಅವರ ಪ್ರಭಾವಿ ಬೌಲಿಂಗ್ ನೆರವಿನಿಂದ ಪಾಕಿಸ್ತಾನ ತಂಡದವರು ಇಲ್ಲಿ ನಡೆಯುತ್ತಿರುವ ಜಿಂಬಾಬ್ವೆ ವಿರುದ್ಧದ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಮೇಲುಗೈ ಸಾಧಿಸಿದ್ದಾರೆ.
ಕ್ವೀನ್ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದ ನಾಲ್ಕನೇ ದಿನದ ಅಂತ್ಯಕ್ಕೆ ಜಿಂಬಾಬ್ವೆ ತನ್ನ ಎರಡನೇ ಇನಿಂಗ್ಸ್‌ನಲ್ಲಿ 54 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿದೆ. ಈ ಮೂಲಕ ಕೇವಲ 81 ರನ್‌ಗಳ ಮುನ್ನಡೆ ಸಾಧಿಸಿದೆ.
ಸಂಕ್ಷಿಪ್ತ ಸ್ಕೋರ್: ಜಿಂಬಾಬ್ವೆ: ಮೊದಲ ಇನಿಂಗ್ಸ್: 150.4 ಓವರ್‌ಗಳಲ್ಲಿ 412 (ಟಿನೊ ಮೊವಾಯೊ 163; ಐಜಾಜ್ ಚೀಮಾ 79ಕ್ಕೆ4, ಸಯೀದ್ ಅಜ್ಮಲ್ 143ಕ್ಕೆ4) ಹಾಗೂ 54 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 135 (ತಟೈಂಡ ಟೈಬು ಬ್ಯಾಟಿಂಗ್ 58; ಮೊಹಮ್ಮದ್ ಹಫೀಜ್ 31ಕ್ಕೆ4); ಪಾಕಿಸ್ತಾನ: ಮೊದಲ ಇನಿಂಗ್ಸ್: 156.1 ಓವರ್‌ಗಳಲ್ಲಿ 466 (ಮೊಹಮ್ಮದ್ ಹಫೀಜ್ 119).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.