ADVERTISEMENT

ಕ್ರಿಕೆಟ್‌: ಸಾಗರ್‌ಗೆ 9 ವಿಕೆಟ್‌

​ಪ್ರಜಾವಾಣಿ ವಾರ್ತೆ
Published 4 ಜೂನ್ 2018, 19:31 IST
Last Updated 4 ಜೂನ್ 2018, 19:31 IST

ಬೆಂಗಳೂರು: ಸಾಗರ್‌ ಅಗ್ರಹಾರ್‌ ಅವರ ಕೈಚಳಕದ ನೆರವಿನಿಂದ 16 ವರ್ಷದೊಳಗಿನವರ ಕೆಎಸ್‌ಸಿಎ ಆಶ್ರಯದ ಗುಂಪು ಒಂದರ 1, 2 ಮತ್ತು 3ನೇ ಡಿವಿಷನ್‌ನ ಅಂತರ ಕ್ಲಬ್‌ ಕ್ರಿಕೆಟ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಜವಾಹರ್‌ ಸ್ಪೋರ್ಟ್ಸ್‌ ಕ್ಲಬ್‌ (2) ತಂಡವು ದೂರವಾಣಿ ಕ್ರಿಕೆಟರ್ಸ್‌ ತಂಡದ ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ.

ಮೊದಲ ಇನಿಂಗ್ಸ್‌ನಲ್ಲಿ ದೂರವಾಣಿ ಕ್ರಿಕೆಟರ್ಸ್‌ ತಂಡವು 49.4 ಓವರ್‌ಗಳಲ್ಲಿ 151 ರನ್‌ಗಳಿಗೆ ಆಲೌಟಾಯಿತು. ಅಮೋಘ ಬೌಲಿಂಗ್‌ ಮಾಡಿದ ಜವಾಹರ್‌ ಸ್ಪೋರ್ಟ್ಸ್‌ ಕ್ಲಬ್‌ (2) ತಂಡದ ಸಾಗರ್‌ ಅಗ್ರಹಾರ್‌ ಅವರು ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಆಘಾತ ನೀಡಿದರು. 39 ರನ್‌ಗಳನ್ನು ನೀಡಿ 7 ವಿಕೆಟ್‌ ಕಬಳಿಸಿದ ಅವರು ದೂರವಾಣಿ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದರು.

ಸಂಕ್ಷಿಪ್ತ ಸ್ಕೋರ್‌: ದೂರವಾಣಿ ಕ್ರಿಕೆಟರ್ಸ್‌: ಮೊದಲ ಇನಿಂಗ್ಸ್‌: 49.4 ಓವರ್‌ಗಳಲ್ಲಿ 151 (ಎ. ವೆಂಕಟೇಶ್‌ ಶಿರಾಲಿಕರ್‌ 55, ಸಾಗರ್‌ ಅಗ್ರಹಾರ್‌ 39ಕ್ಕೆ 7). ಎರಡನೇ ಇನಿಂಗ್ಸ್‌: 25.3 ಓವರ್‌ಗಳಲ್ಲಿ 7 ವಿಕೆಟ್‌ಗೆ 190 ಡಿಕ್ಲೇರ್ಡ್‌ (ಎ. ವೆಂಕಟೇಶ್‌ ಶಿರಾಲಿಕರ್‌ 53, ಕಾರ್ತಿಕ್‌ ಗೌಡ ಔಟಾಗದೆ 34, ಸಾಗರ್‌ ಅಗ್ರಹಾರ್‌ 61ಕ್ಕೆ 2).

ADVERTISEMENT

ಜವಾಹರ್‌ ಸ್ಪೋರ್ಟ್ಸ್‌ ಕ್ಲಬ್‌ (2): ಮೊದಲ ಇನಿಂಗ್ಸ್‌: 85.4 ಓವರ್‌ಗಳಲ್ಲಿ 189 (ಪೃಥ್ವಿ ರಾಜ್‌ ಔಟಾಗದೆ 93, ಸಾಗರ್‌ ಅಗ್ರಹಾರ್‌ 30, ಅರ್ಚಿತ್‌ ಸುಬುದ್ಧಿ 16ಕ್ಕೆ 2). ಎರಡನೇ ಇನಿಂಗ್ಸ್: 44 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 116 (ಎ. ವೆಂಕಟೇಶ್‌ ಶಿರಾಲಿಕರ್‌ 33ಕ್ಕೆ 4). ಫಲಿತಾಂಶ: ಪಂದ್ಯ ಡ್ರಾ.

ರಾಜಾಜಿನಗರ ಕ್ರಿಕೆಟರ್ಸ್‌: ಮೊದಲ ಇನಿಂಗ್ಸ್‌: 62.5 ಓವರ್‌ಗಳಲ್ಲಿ 148 (ಎಸ್‌. ಸಿರೀಶ್‌ 50, ಆಯುಶ್‌ ಕುಮಾರ್‌ ಬರಿಕ್‌ 47ಕ್ಕೆ 4, ಅನೀಶ್ವರ್‌ 22ಕ್ಕೆ 2). ಎರಡನೇ ಇನಿಂಗ್ಸ್‌: 21.4 ಓವರ್‌ಗಳಲ್ಲಿ 86 (ಅಶ್ವಿನ್‌ ತಂತ್ರಿ 30, ತುಷಾರ್‌ ಕುಮಾರೇಸನ್‌ 18ಕ್ಕೆ 3, ಅನೀಶ್ವರ್‌ 16ಕ್ಕೆ 5).

ಸ್ವಸ್ತಿಕ್‌ ಯೂನಿಯನ್‌ ಕ್ರಿಕೆಟ್‌ ಕ್ಲಬ್‌ (2): ಮೊದಲ ಇನಿಂಗ್ಸ್‌: 89 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 419 (ವಿಕ್ರಮ್‌ ಕುಮಾರ್‌ 103, ಅನೀಶ್ವರ್‌ ಗೌತಮ್‌ 55, ಜೆ ಬೊರಾ 53, ಎನ್‌. ಪ್ರಥಮ್‌ 11ಕ್ಕೆ 2, ರಾಹುಲ್‌ ಪ್ರಸನ್ನ 95ಕ್ಕೆ 2). ಫಲಿತಾಂಶ: ಸ್ವಸ್ತಿಕ್‌ ಯೂನಿಯನ್‌ ಕ್ರಿಕೆಟ್‌ ಕ್ಲಬ್‌ಗೆ ಇನಿಂಗ್ಸ್‌ ಮತ್ತು 185 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.