ಬೆಂಗಳೂರು: ಎನ್. ಆರ್. ಗ್ಯಾಂಗ್ಟ (ಅಜೇಯ 117) ಗಳಿಸಿದ ಶತಕದ ನೆರವಿನಿಂದ ಹಿಮಾಚಲ ಪ್ರದೇಶ `ಎ~ ತಂಡ ಇಲ್ಲಿ ನಡೆಯುತ್ತಿರುವ ಸಿ.ಕೆ. ನಾಯ್ಡು ಟ್ರೋಫಿ ಎಲೈಟ್ `ಎ~ ಕ್ರಿಕೆಟ್ ಪಂದ್ಯದಲ್ಲಿ ಕರ್ನಾಟಕ `ಎ~ ವಿರುದ್ಧ ಉತ್ತಮ ಮೊತ್ತ ಪೇರಿಸಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ಮೊದಲ ದಿನದಾಟದ ಅಂತ್ಯಕ್ಕೆ ಹಿಮಾಚಲ ಪ್ರದೇಶ ತಂಡ 90 ಓವರ್‌ಗಳಲ್ಲಿ 8 ವಿಕೆಟ್‌ಗೆ 283 ರನ್ ಪೇರಿಸಿದೆ. ಒಂದು ಬದಿಯಲ್ಲಿ ವಿಕೆಟ್ ಬೀಳುತ್ತಿದ್ದರೂ ಒತ್ತಡಕ್ಕೆ ಒಳಗಾಗದ ಗ್ಯಾಂಗ್ಟ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದರು. 191 ಎಸೆತಗಳನ್ನು ಎದುರಿಸಿದ ಅವರು 17 ಬೌಂಡರಿ ಗಳಿಸಿದರು.
59 ರನ್‌ಗಳಿಗೆ ಮೂರು ವಿಕೆಟ್ ಪಡೆದ ಶರತ್ ಕರ್ನಾಟಕದ ಪರ ಯಶಸ್ವಿ ಬೌಲರ್ ಎನಿಸಿಕೊಂಡರು. ಅವರಿಗೆ ಕೆ. ಗೌತಮ್ (84ಕ್ಕೆ 2) ತಕ್ಕ ಸಾಥ್ ನೀಡಿದರು.
ಸಂಕ್ಷಿಪ್ತ ಸ್ಕೋರ್: ಹಿಮಾಚಲ ಪ್ರದೇಶ `ಎ~: 90 ಓವರ್‌ಗಳಲ್ಲಿ 8 ವಿಕೆಟ್‌ಗೆ 283 (ಎನ್.ಆರ್. ಗ್ಯಾಂಗ್ಟ ಬ್ಯಾಟಿಂಗ್ 117, ಎ.ಕೆ. ಕೌಶಿಕ್ 39, ಜೆ.ಪಿ. ಸಿಂಗ್ 34, ಎಚ್.ಎಸ್. ಶರತ್ 59ಕ್ಕೆ 3, ಕೆ. ಗೌತಮ್ 84ಕ್ಕೆ 2)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.