ADVERTISEMENT

ಕ್ರೀಡೆ: ಚುಟುಕು ಗುಟುಕು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 19:30 IST
Last Updated 3 ಸೆಪ್ಟೆಂಬರ್ 2011, 19:30 IST

ಪೂರ್ವಂಕರ  ಗಾಲ್ಫ್ ಲೀಗ್
ಬೆಂಗಳೂರು: ಪೂರ್ವಂಕರ ಸಮೂಹ ಹಾಗೂ ಟಾಷ್ ಗಾಲ್ಫ್  ಸ್ಪೋರ್ಟ್ಸ್ ಖಾಸಗಿ ನಿಯಮಿತ ಸಂಸ್ಥೆ ಆಶ್ರಯದಲ್ಲಿ 2011ನೇ ಸಾಲಿನ ಗಾಲ್ಫ್ ಲೀಗ್ ಬೆಂಗಳೂರು, ನವದೆಹಲಿ, ಮುಂಬೈ, ಪುಣೆ, ಕೋಲ್ಕತ್ತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿದೆ.

ವಲಯ ತಂಡಗಳ ಹಣಾಹಣಿಯ ಪೂರ್ವಂಕರ ಟಾಷ್ ಗಾಲ್ಫ್ ಲೀಗ್ ವಿವರವನ್ನು ನೀಡಿದ ಏಷ್ಯಾ ಕ್ರೀಡಾಕೂಟದ ಬೆಳ್ಳಿ ಪದಕ ವಿಜೇತ ರಶೀದ್ ಖಾನ್ `ಅಮೆಚೂರ್ ಗಾಲ್ಫರ್‌ಗಳು ಸಾಮರ್ಥ್ಯ ತೋರಲು ಈ ಟೂರ್ನಿ ಉತ್ತಮ ಅವಕಾಶವಾಗಿದೆ~ ಎಂದು ಶನಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ವಿವಿಧ ವಲಯ ಲೀಗ್‌ನಲ್ಲಿ ಗಾಲ್ಫರ್‌ಗಳು ಪೈಪೋಟಿ ನಡೆಸಿ ವಲಯ ತಂಡವನ್ನು ಪ್ರತಿನಿಧಿಸುವ ಅರ್ಹತೆ ಪಡೆಯುವರು. ಫೈನಲ್‌ನಲ್ಲಿ ವಲಯಗಳ ಒಟ್ಟು 24 ಗುಂಪುಗಳು ಅರ್ಹತೆ ಪಡೆಯಲಿವೆ. ಅಂತಿಮ ಲೀಗ್ ಹಣಾಹಣಿಯು ಶ್ರೀಲಂಕಾದ ವಿಕ್ಟೋರಿಯಾ ಗಾಲ್ಫ್ ಮತ್ತು ಕಂಟ್ರಿ ರೆಸಾರ್ಟ್ ಕೋರ್ಸ್‌ನಲ್ಲಿ ನಡೆಯಲಿದೆ.

ಪತ್ರಿಕಾ ಗೋಷ್ಠಿಯಲ್ಲಿ ಪೂರ್ವಂಕರ ಮುಖ್ಯ ವ್ಯವಸ್ಥಾಪಕ ಅಧಿಕಾರಿ ಜ್ಯಾಕ್ ಬ್ಯಾಸ್ಟಿಯನ್ ನಜಾರೆಥ್, ಟಾಷ್‌ನ ವ್ಯವಸ್ಥಾಪಕ ನಿರ್ದೇಶಕ ರತನ್ ಕುಮಾರ್ ಹಾಗೂ ಭಾರತದ ಮೊದಲ ಕ್ರಮಾಂಕದ ಗಾಲ್ಫರ್ ಎಸ್.ಚಿಕ್ಕರಂಗಪ್ಪ ಸೇರಿದಂತೆ ಅನೇಕ ಅಮೇಚೂರ್ ಗಾಲ್ಫರ್‌ಗಳು ಹಾಜರಿದ್ದರು.

ಕಬಡ್ಡಿ ಟೂರ್ನಿ
ಬೆಂಗಳೂರು:
ಹೂಡಿ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಸೆಪ್ಟೆಂಬರ್ 9 ಹಾಗೂ 10ರಂದು ಪ್ರೌಢ ಶಾಲೆಗಳ ಹಾಗೂ ಪ್ರಥಮ ದರ್ಜೆ ಕಾಲೇಜುಗಳ ಕಬಡ್ಡಿ ಟೂರ್ನಿ ನಗರದ ವೈಟ್‌ಫೀಲ್ಡ್ ಮುಖ್ಯರಸ್ತೆಯಲ್ಲಿನ ಡಾ.ರಾಜ್ ಕುಮಾರ್ ಕಬಡ್ಡಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಆಸಕ್ತ ಶಾಲೆ ಹಾಗೂ ಕಾಲೇಜುಗಳು ಸೆ.6ರೊಳಗೆ ಪ್ರವೇಶ ಪತ್ರಗಳನ್ನು ಆಟಗಾರರ ಅಗತ್ಯ ವಯಸ್ಸಿನ ದಾಖಲೆಗಳೊಂದಿಗೆ ಸಂಘಟಕರಿಗೆ ತಲುಪಿಸಬೇಕು. ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ಸಂಖ್ಯೆ 9980857573 ಅಥವಾ 9980342089ಗೆ ಸಂಪರ್ಕಿಸಲು ಕೋರಲಾಗಿದೆ.

ಬ್ಯಾಡ್ಮಿಂಟನ್: ಕ್ವಾರ್ಟರ್‌ಫೈನಲ್‌ಗೆ ಆದಿತ್ಯ ಪ್ರಕಾಶ್
ಬೆಂಗಳೂರು:
ಕರ್ನಾಟಕ ಆದಿತ್ಯ ಪ್ರಕಾಶ್ ಇಲ್ಲಿ ನಡೆಯುತ್ತಿರುವ ಐಎಫ್‌ಸಿಎ ಅಖಿಲ ಭಾರತ ಸೀನಿಯರ್ ರ‌್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.
ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ಆದಿತ್ಯ           ಪ್ರಕಾಶ್ 21-17, 21-13ರಲ್ಲಿ ಸಾರಂಗ ಲಾಖೇನ ವಿರುದ್ಧ ಗೆಲುವು ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.