ADVERTISEMENT

ಗಮನ ಸೆಳೆದ ಪ್ರದರ್ಶನ ಪಂದ್ಯ

ಕೊಡವ ಹಾಕಿ ಉತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2013, 19:59 IST
Last Updated 14 ಏಪ್ರಿಲ್ 2013, 19:59 IST

ಮಡಿಕೇರಿ: ಕೊಡವ ಕುಟುಂಬಗಳ ನಡುವಿನ 17ನೇ ವರ್ಷದ ಹಾಕಿ ಉತ್ಸವ `ಮಾದಂಡ ಕಪ್- 2013' ಉದ್ಘಾಟನೆ ವೇಳೆ ನಡೆದ ಕೊಡಗು ಇಲೆವೆನ್ ಹಾಗೂ ಪಂಜಾಬ್ ಇಲೆವೆನ್ ನಡುವಿನ ಪ್ರದರ್ಶನ ಪಂದ್ಯ ಹಾಕಿ ಪ್ರೇಮಿಗಳ ಮನಸೆಳೆಯಿತು.

ಭಾನುವಾರ ನಡೆದ ಈ ಪಂದ್ಯ 1-1 ಗೋಲಿನಿಂದ ಡ್ರಾನಲ್ಲಿ ಕೊನೆಗೊಂಡಿತು. ಪಂಜಾಬ್ ತಂಡದ ಹರ್‌ಪ್ರೀತ್ 31ನೇ ನಿಮಿಷದಲ್ಲಿ ಗೋಲು ತಂದಿತ್ತರು. 59ನೇ ನಿಮಿಷದಲ್ಲಿ ಕೊಡಗಿನ ಮುತ್ತಣ್ಣ ಗೋಲು ಗಳಿಸಿ ಸಮಬಲಕ್ಕೆ ಕಾರಣರಾದರು.

ಪ್ರದರ್ಶನ ಪಂದ್ಯದಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳಿಗೆ ಮಾದಂಡ ಹಾಕಿ ಉತ್ಸವ ಸಮಿತಿಯ ವತಿಯಿಂದ ಸ್ಮರಣಿಕೆ ನೀಡಲಾಯಿತು.
ವಿರಾಜಪೇಟೆ ಬಳಿಯ ಬಾಳುಗೋಡಿನ ಕೊಡವ ಸಮಾಜಗಳ ಒಕ್ಕೂಟದ ಸಾಂಸ್ಕೃತಿಕ ಮತ್ತು ಕ್ರೀಡಾ ಸಮುಚ್ಚಯದ ಆವರಣದಲ್ಲಿ ಹಾಕಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಕೊಡವ ಹಾಕಿ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ಪಾಂಡಂಡ ಎಂ. ಕುಟ್ಟಪ್ಪ ಅವರು ಬೆಳ್ಳಿಯ ಹಾಕಿ ಸ್ಟಿಕ್‌ನಿಂದ ಚೆಂಡನ್ನು ಬಾರಿಸುವ ಮೂಲಕ ಚಾಲನೆ ನೀಡಿದರು. 225 ತಂಡಗಳು ಭಾಗವಹಿಸಲಿರುವ ಈ ಹಾಕಿ ಉತ್ಸವ ಮೇ 12ರವರೆಗೆ ಜರುಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.