ADVERTISEMENT

ಗಾಲ್ಫ್:ಚಿಕ್ಕರಂಗಪ್ಪಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2011, 18:45 IST
Last Updated 3 ಜೂನ್ 2011, 18:45 IST
ಗಾಲ್ಫ್:ಚಿಕ್ಕರಂಗಪ್ಪಗೆ ಪ್ರಶಸ್ತಿ
ಗಾಲ್ಫ್:ಚಿಕ್ಕರಂಗಪ್ಪಗೆ ಪ್ರಶಸ್ತಿ   

ಬೆಂಗಳೂರು: ಸ್ಥಳೀಯ ಗಾಲ್ಫರ್ ಎಸ್.ಚಿಕ್ಕರಂಗಪ್ಪ ಅವರು ಟೊಯೊಟಾ-ಐಜಿಯು ದಕ್ಷಿಣ ಭಾರತ ಜೂನಿಯರ್ ಗಾಲ್ಫ್  ಚಾಂಪಿಯನ್‌ಷಿಪ್‌ನ ಬಾಲಕರ `ಎ-ಬಿ~ ವಿಭಾಗದಲ್ಲಿ ಪ್ರಶಸ್ತಿ ಶ್ರೇಯಕ್ಕೆ ಪಾತ್ರರಾದರು.
ಕರ್ನಾಟಕ ಗಾಲ್ಫ್ ಸಂಸ್ಥೆ (ಕೆಜಿಎ) ಕೋರ್ಸ್‌ನಲ್ಲಿ ಶುಕ್ರವಾರ ನಡೆದ `ಎ-ಬಿ~ ವಿಭಾಗದ ಕೊನೆಯ ಸುತ್ತಿನಲ್ಲಿ ನಿಖರವಾಗಿ ಕ್ಲಬ್ ಬೀಸುವ ಮೂಲಕ ಚಾಂಪಿಯನ್ ಪಟ್ಟವನ್ನು ಪಡೆದುಕೊಂಡರು.

ಎಸ್.ಚಿಕ್ಕರಂಗಪ್ಪ ಗುರುವಾರದ ಪೈಪೋಟಿಯ ಒಂದು ಹಂತದಲ್ಲಿ ಸ್ವಲ್ಪ ಮಟ್ಟಿಗೆ ಲಯ ತಪ್ಪಿದ್ದರು. ಆದರೆ ಚಾಂಪಿಯನ್‌ಷಿಪ್‌ನ ಕೊನೆ ದಿನ ಮಾತ್ರ ಅಂಥ ತಪ್ಪುಗಳನ್ನು ಮಾಡಲಿಲ್ಲ. ತಮ್ಮ ಪ್ರಾಬಲ್ಯ ಕಾಯ್ದುಕೊಂಡು ಅಗ್ರಸ್ಥಾನದಲ್ಲಿ ಗಟ್ಟಿಯಾಗಿ ನಿಂತರು. ಅವರು ಗುರುವಾರದ ಆಟಕ್ಕಿಂತ ಹೆಚ್ಚು ಪ್ರಭಾವಿ ಎನಿಸಿದರು. ಆದ್ದರಿಂದಲೇ ಚಿಕ್ಕರಂಗಪ್ಪ (69+67+77+68=281) ಅವರು ಮುನ್ನಡೆ ಉಳಿಸಿಕೊಳ್ಳಲು ಸಾಧ್ಯವಾಯಿತು.

ಮೂರನೇ ಸುತ್ತಿನಲ್ಲಿ ಅಚ್ಚರಿಪಡುವ ರೀತಿಯಲ್ಲಿ ಚೇತರಿಸಿಕೊಂಡಿದ್ದ ತ್ರಿಶೂಲ್ ಚಿನ್ನಪ್ಪ (76+71+74+75=296) ಅವರು ಎರಡನೇ ಸ್ಥಾನಕ್ಕೆ ಸಮಾಧಾನಪಟ್ಟರು. ರಾಹುಲ್ ರವಿ ಹಾಗೂ ಹರಜೋತ್ ಸಿಂಗ್ ಸೋನಿ ಅವರನ್ನು ಹಿಂದೆ ಹಾಕಿದ ಸಯ್ಯದ್ ಸಾದಿಕ್ ಅಹ್ಮದ್ (72+81+75+72=300) ಅವರು ಮೂರನೇ ಸ್ಥಾನವನ್ನು ತಮ್ಮದಾಗಿಸಿಕೊಂಡರು. ರಾಹುಲ್ ರವಿ (70+75+81+76=302) ಹಾಗೂ ಯಶಸ್ ಚಂದ್ರ (73+80+79+75=307) ಅವರು ಕ್ರಮವಾಗಿ ನಂತರದ ಸ್ಥಾನದಲ್ಲಿ ನಿಂತರು.

ಪಿಯೂಶ್ ಸಂಗ್ವಾನ್ (75+77+81+82=315), ಪ್ರಕಾಶ್ ಆಸವಾ (79+82+78+79=318) ಹಾಗೂ ಫಿರೋಜ್ ಸಿಂಗ್ ಗರೆವಾಲ್ (80+87+82+74=323) ಅವರು ಬಾಲಕರ `ಬಿ~ ವಿಭಾಗದಲ್ಲಿ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದರು.

`ಸಿ~ ವಿಭಾಗದಲ್ಲಿ ತನ್ವೀರ್ ಕಹ್ಲೊನ್ (80+82+81+76=319) ಹಾಗೂ `ಡಿ~ ವಿಭಾಗದಲ್ಲಿ ಕರಣ್ ಪ್ರತಾಪ್ ಸಿಂಗ್ (79+81+80=240 ಅವರು ಚಾಂಪಿಯನ್ ಆಗಿ ಹೊರಹೊಮ್ಮಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.