ಚಂಡೀಗಡ (ಐಎಎನ್‌ಎಸ್): ಎಸ್. ಚಿಕ್ಕರಂಗಪ್ಪ ಅವರನ್ನು ಹಿಂದಿಕ್ಕಿದ ಬೆಂಗಳೂರಿನ ಯುವ ಗಾಲ್ಫರ್ ಖಾಲಿನ್ ಜೋಶಿ ಇಲ್ಲಿ ನಡೆಯುತ್ತಿರುವ ಅಮೆಚೂರ್ ಗಾಲ್ಫ್ ಚಾಂಪಿಯನ್‌ಷಿಪ್‌ನ ಮೂರನೇ ಸುತ್ತಿನ ಅಂತ್ಯಕ್ಕೆ ಅಗ್ರಸ್ಥಾನ ಗಳಿಸಿದ್ದಾರೆ.
ಗುರುವಾರ ಚಂಡೀಗಡ ಗಾಲ್ಫ್ ಕ್ಲಬ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಎರಡು ಸ್ಟೋಕ್‌ಗಳಲ್ಲಿ ಬಳಸಿಕೊಂಡ ಜೋಶಿ ಒಟ್ಟು 66 ಪಾಯಿಂಟ್‌ಗಳನ್ನು ಕಲೆ ಹಾಕಿದರು. ಈ ಮೂಲಕ ಎರಡನೇ ಸುತ್ತಿನ ಅಂತ್ಯಕ್ಕೆ ಅಗ್ರಸ್ಥಾನದಲ್ಲಿ ಚಿಕ್ಕರಂಗಪ್ಪ (69) ಅವರನ್ನು ಹಿಂದಿಕ್ಕಿದರು.
ಉತ್ತಮ ಪ್ರದರ್ಶನ ಮುಂದುವರಿಸಿರುವ ಗಗನ್ ವರ್ಮ ಎರಡನೇ ಸುತ್ತಿನಲ್ಲಿ 71 ಪಾಯಿಂಟ್ ಗಳಿಸಿದ್ದರು. ಈಗ (70) ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಮೊದಲ ಎರಡು ಸ್ಥಾನಗಳಲ್ಲಿರುವ ಬೆಂಗಳೂರಿನ ಸ್ಪರ್ಧಿಗಳ ನಡುವೆ ಪ್ರಶಸ್ತಿಗಾಗಿ ಪೈಪೋಟಿ ನಡೆಯುತ್ತಿದೆ. ಮಾನವ್ ದಾಸ್ ಹಾಗೂ ತ್ರಿಶೂಲ್ ಚಿನ್ನಪ್ಪ (72 ಪಾಯಿಂಟ್) ಗಳಿಸಿ ಜಂಟಿ ನಾಲ್ಕನೇ ಸ್ಥಾನ ಗಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.