ADVERTISEMENT

ಗಾಲ್ಫ್: ಅದಿತಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2012, 19:30 IST
Last Updated 19 ಏಪ್ರಿಲ್ 2012, 19:30 IST

ನೋಯ್ಡಾ (ಪಿಟಿಐ): ಅದಿತಿ ಅಶೋಕ್ ಇಲ್ಲಿ ನಡೆದ `ಉಷಾ ದೆಹಲಿ ಮಹಿಳೆಯರ ಮತ್ತು ಜೂನಿಯರ್ ಬಾಲಕಿಯರ~ ಗಾಲ್ಫ್ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಗೆದ್ದುಕೊಂಡರು.

ನೋಯ್ಡಾ ಗಾಲ್ಫ್ ಕ್ಲಬ್‌ನಲ್ಲಿ ಗುರುವಾರ ನಡೆದ ಮೂರನೇ ಹಾಗೂ ಅಂತಿಮ ಸುತ್ತಿನ ಸ್ಪರ್ಧೆಯನ್ನು ಕೊನೆಗೊಳಿಸಲು ಬೆಂಗಳೂರಿನ ಅದಿತಿ 74 ಅವಕಾಶಗಳನ್ನು ಬಳಸಿಕೊಂಡರು. ಅವರು ಒಟ್ಟು 222 ಸ್ಟ್ರೋಕ್‌ಗಳೊಂದಿಗೆ ಅಗ್ರಸ್ಥಾನ ಪಡೆದರು.

ಗುರ್‌ಬಾನಿ ಸಿಂಗ್ (225) ಎರಡನೇ ಸ್ಥಾನ ಪಡೆದರು. ಮಿಲೀ ಸರೋಹ ಮೂರನೇ ಸ್ಥಾನ ಪಡೆದರೆ, ಗುರ್‌ಸಿಮರ್ ಬದ್ವಾಲ್ ನಾಲ್ಕನೇ ಸ್ಥಾನ ತಮ್ಮದಾಗಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.