ADVERTISEMENT

ಗಾಲ್ಫ್: ಭಾರತದ ಬಾಲಕ, ಬಾಲಕಿಯರಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2013, 19:40 IST
Last Updated 8 ಡಿಸೆಂಬರ್ 2013, 19:40 IST
ಏಷ್ಯಾ ಪೆಸಿಫಿಕ್ ಜೂನಿಯರ್ ಗಾಲ್ಫ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ (ಎಡದಿಂದ) ಮನು ಗಂದಾಸ್, ವಿರಾಜ್ ಮಾದಪ್ಪ, ಅದಿತಿ ಅಶೋಕ್ ಮತ್ತು ರಿಧಿಮಾ ದಿಲವಾರಿ ಟ್ರೋಫಿಯೊಂದಿಗೆ ಸಂಭ್ರಮಿಸಿದ ಕ್ಷಣ 	–ಪಿಟಿಐ ಚಿತ್ರ
ಏಷ್ಯಾ ಪೆಸಿಫಿಕ್ ಜೂನಿಯರ್ ಗಾಲ್ಫ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ (ಎಡದಿಂದ) ಮನು ಗಂದಾಸ್, ವಿರಾಜ್ ಮಾದಪ್ಪ, ಅದಿತಿ ಅಶೋಕ್ ಮತ್ತು ರಿಧಿಮಾ ದಿಲವಾರಿ ಟ್ರೋಫಿಯೊಂದಿಗೆ ಸಂಭ್ರಮಿಸಿದ ಕ್ಷಣ –ಪಿಟಿಐ ಚಿತ್ರ   

ಕೋಲ್ಕತ್ತಾ(ಪಿಟಿಐ): ಭಾರತದ ಬಾಲಕ ಹಾಗೂ ಬಾಲಕಿಯರ ತಂಡ ಇಲ್ಲಿ ನಡೆಯುತ್ತಿರುವ ಏಷ್ಯಾ ಪೆಸಿಫಿಕ್ ಜೂನಿಯರ್ ಗಾಲ್ಫ್ ಚಾಂಪಿಯನ್‌ಷಿಪ್‌ನಲ್ಲಿ ಇದೇ ಮೊದಲ ಬಾರಿಗೆ ಪ್ರಶಸ್ತಿ ಜಯಿಸುವ ಮೂಲಕ ದಾಖಲೆ ಬರೆದಿದೆ.

ಭಾನುವಾರ ನಡೆದ ಬಾಲಕಿಯರ ವೈಯಕ್ತಿಕ ವಿಭಾಗದ  ಆಟದಲ್ಲಿ ಬೆಂಗಳೂರಿನ ಅದಿತಿ ಅಶೋಕ್ ಚೀನಾ ತೈಪೆಯ ಮಿನ್ ಜೂ ಚೆನ್ ವಿರುದ್ಧ ಗೆದ್ದರು.

ಬಾಲಕರ ವಿಭಾಗದಲ್ಲಿ ವಿರಾಜ್ ಮಾದಪ್ಪ ಮತ್ತು ಮನು ಗಂದಾಸ್ (586) ಜೋಡಿ ಭಾರತ ‘ಎ’ ತಂಡವನ್ನೂ, ಬಾಲಕಿಯರ ವಿಭಾಗದಲ್ಲಿ ಅದಿತಿ ಅಶೋಕ್ ಮತ್ತು ರಿಧಿಮಾ ದಿಲವಾರಿ (442)ಜೋಡಿ ಭಾರತ ‘ಬಿ’ ತಂಡವನ್ನೂ ಗೆಲುವಿನತ್ತ ಕೊಂಡೊಯ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.