ADVERTISEMENT

ಗಿಬ್ಸನ್‌ಗೆ ತಿರುಗೇಟು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2011, 19:30 IST
Last Updated 24 ಮಾರ್ಚ್ 2011, 19:30 IST

ಢಾಕಾ (ಪಿಟಿಐ): ಕ್ವಾರ್ಟರ್ ಫೈನಲ್‌ನಲ್ಲಿ ಪಾಕ್ ವಿರುದ್ಧ ಸೋಲು ಅನುಭವಿಸಿದ ವೆಸ್ಟ್ ಇಂಡೀಸ್ ತಂಡದಲ್ಲಿ ಈಗ ಪರಸ್ಪರ ‘ಟೀಕೆ’ ಕೇಳಿಬರುತ್ತಿದೆ.

ಕ್ರಿಸ್ ಗೇಲ್ ಅವರು ತಂಡದ ಕೋಚ್ ಆಟಿಸ್ ಗಿಬ್ಸನ್ ವಿರುದ್ಧ ಬಹಿರಂಗವಾಗಿಯೇ ಟೀಕೆ ಮಾಡಿದ್ದಾರೆ. ತಂಡದ ಸೋಲಿಗೆ ಹಿರಿಯ ಆಟಗಾರರನ್ನು ಟೀಕಿಸುವುದು ಸುಲಭ ಎಂದು ಗೇಲ್ ತಿರುಗೇಟು ನೀಡಿದ್ದಾರೆ.

ಗಿಬ್ಸನ್ ಅವರು, ‘ಸೋಲಿಗೆ ಹಿರಿಯ ಆಟಗಾರರೇ ಕಾರಣ’ ಎಂದಿದ್ದರು. ಇದಕ್ಕೆ ಗೇಲ್ ‘ಸೋಲಿಗೆ ಹಿರಿಯ ಆಟಗಾರರನ್ನು ಟೀಕಿಸುವುದು ಸುಲಭ. ಆದರೆ ಸತ್ಯವನ್ನು ಒಪ್ಪಿಕೊಳ್ಳುವುದು ಕಷ್ಟ’ ಎಂದು ಗೇಲ್ ಪ್ರತ್ಯುತ್ತರ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.