ಕೇಪ್ ಟೌನ್ (ಎಎಫ್‌ಪಿ): ಆಸ್ಟ್ರೇಲಿಯಾ ತಂಡ ದಕ್ಷಿಣ ಅಫ್ರಿಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ಹಾದಿಯಲ್ಲಿ ದಿಟ್ಟ ಹೆಜ್ಜೆಯಟ್ಟಿದೆ.
ಇದೀಗ ಗ್ರೇಮ್ ಸ್ಮಿತ್ ಬಳಗ ಗೆಲುವು ಪಡೆಯಲು ಅಂತಿಮ ದಿನ 440 ರನ್ ಗಳಿಸಬೇಕಿದೆ. ಆಸೀಸ್ ತಂಡದ ಜಯಕ್ಕೆ ಆರು ವಿಕೆಟ್‌ಗಳು ಬೇಕು.
ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್ 494 ಡಿಕ್ಲೇರ್ಡ್ ಮತ್ತು ಎರಡನೇ ಇನಿಂಗ್ಸ್ 58 ಓವರ್ ಗಳಲ್ಲಿ 5 ವಿಕೆಟ್‌ಗೆ 303 ಡಿಕ್ಲೇರ್ಡ್ (ಕ್ರಿಸ್ ರೋಜರ್ಸ್ 39, ಡೇವಿಡ್ ವಾರ್ನರ್ 145, ಅಲಕ್ಸ್ ಡೂಲನ್ 37, ಸ್ಟೀವನ್ ಸ್ಮಿತ್ ಔಟಾಗದೆ 36, ಕೈಲ್ ಅಬಾಟ್ 61ಕ್ಕೆ 3)
ದಕ್ಷಿಣ ಆಫ್ರಿಕಾ: ಮೊದಲ ಇನಿಂಗ್ಸ್ 82.5 ಓವರ್‌ಗಳಲ್ಲಿ 287 ಮತ್ತು ಎರಡನೇ ಇನಿಂಗ್ಸ್ 41 ಓವರ್‌ಗಳಲ್ಲಿ 4 ವಿಕೆಟ್‌ಗೆ 71 (ಹಾಶಿಮ್ ಆಮ್ಲಾ 41, ಮಿಷೆಲ್ ಜಾನ್ಸನ್ 31ಕ್ಕೆ 2)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.