ಮುಂಬೈ (ಪಿಟಿಐ): ವಾಸೀಮ್ ಜಾಫರ್ ಅವರ ಅಣ್ಣನ ಪುತ್ರ 14ರ ಹರೆಯದ ಅರ್ಮನ್ ಜಾಫರ್ ಮುಂಬರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಪ್ರಕಟಿಸಲಾಗಿರುವ ಮುಂಬೈ ತಂಡದ ಸಂಭಾವ್ಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಮುಂಬೈ ಆಯ್ಕೆ ಸಮಿತಿಯ ಈ ನಿರ್ಧಾರ ಕುತೂಹಲಕ್ಕೆ ಕಾರಣವಾಗಿದೆ.
ಈ ತಂಡದಲ್ಲಿ ವಾಸೀಮ್ ಕೂಡ ಇದ್ದಾರೆ. ಅಂತಿಮ ತಂಡದಲ್ಲಿ ಸ್ಥಾನ ಲಭಿಸಿದರೆ ಜಾಫರ್ ಹಾಗೂ ಅರ್ಮನ್ ಇಬ್ಬರೂ ಒಟ್ಟಿಗೆ ಒಂದೇ ತಂಡದಲ್ಲಿ ಆಡಲು ಅವಕಾಶ ಪಡೆಯಲಿದ್ದಾರೆ. ಸಚಿನ್ ತೆಂಡೂಲ್ಕರ್ ಸಹ ಈ ತಂಡದಲ್ಲಿದ್ದಾರೆ. ಚಿಕ್ಕಪ್ಪ ವಾಸೀಮ್ ಹಾಗೂ ಕ್ರಿಕೆಟ್ ದಿಗ್ಗಜ ಸಚಿನ್ ಜೊತೆಗೆ ಅಭ್ಯಾಸ ನಡೆಸುವುದು ಅರ್ಮನ್ ಪಾಲಿಗೆ ಜೀವಮಾನದ ಅತ್ಯುತ್ತಮ ಅವಕಾಶ ಎನಿಸಲಿದೆ.
ಸ್ಥಳೀಯ ಟೂರ್ನಿಯೊಂದರಲ್ಲಿ ಅರ್ಮನ್ ಫೆಬ್ರುವರಿಯಲ್ಲಿ 473 ರನ್ ಗಳಿಸಿ ಗಮನ ಸೆಳೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.