ಪುಣೆ: ಚೆನ್ನೈ ಚೀತಾಸ್ ತಂಡದವರು ಇಲ್ಲಿ ನಡೆದ ವಿಶ್ವ ಹಾಕಿ ಸರಣಿಯ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದರು.
ಈ ತಂಡಕ್ಕೆ ಒಲಿದ ಮೂರನೇ ಗೆಲುವು ಇದು. ಆದ್ದರಿಂದ ಚೆನ್ನೈ ತಂಡದ ಖಾತೆಯಲ್ಲಿ ಒಟ್ಟು 10 ಪಾಯಿಂಟ್‌ಗಳು ಈಗ ಭದ್ರವಾಗಿವೆ.
ಗುರುವಾರ ನಡೆದ ಎಂಟನೇ ಪಂದ್ಯದಲ್ಲಿ ಚೆನ್ನೈ 3-1ಗೋಲುಗಳಿಂದ ಪುಣೆ ಸ್ಟ್ರೈಕರ್ಸ್ ಎದುರು ಜಯ ಸಾಧಿಸಿತು.
ಆ್ಯಡಮ್ ಸಿನ್ಸಿಲಾರ್ 9ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ನಂತರ ವಿಕಾಸ್ ಶರ್ಮ 29ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು. ಈ ಪರಿಣಾಮ ಚೆನ್ನೈ ವಿರಾಮದ ವೇಳೆಗೆ 2-0ರಲ್ಲಿ ಮುನ್ನಡೆ ಹೊಂದಿತ್ತು.
ವಿರಾಮದ ಆರಂಭದಲ್ಲಿ ಚುರುಕಾದ ಆತಿಥೇಯ ತಂಡದ ರೋಷನ್ ಮಿಂಚ್ 37ನೇ ನಿಮಿಷದಲ್ಲಿ ಗೋಲು ಗಳಿಸಿ ತಿರುಗೇಟು ನೀಡಿದರು. ಆದರೆ, ಎದುರಾಳಿ ಆಟಗಾರರು ಇದಕ್ಕೆ ಅವಕಾಶ ನೀಡಲಿಲ್ಲ.
ವಿಜಯಿ ತಂಡದ ಇಮ್ರಾನ್ ವಾರ್ಸಿ 70ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿದರು. ಇದರಿಂದ ಚೆನ್ನೈ ಮಡಿಲಿಗೆ ಗೆಲುವು ಒಲಿಯಿತು.
ಪುಣೆ ಸ್ಟ್ರೈಕರ್ಸ್ ತಂಡ ಆಡಿರುವ ಎಂಟು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಪಡೆದು, 12 ಪಾಯಿಂಟ್ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.