ADVERTISEMENT

ಚೆಸ್: ವಿಯಾನಿ-ವನೆಸಾಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2012, 21:51 IST
Last Updated 27 ನವೆಂಬರ್ 2012, 21:51 IST

ಕಾರವಾರ:  ಮಂಗಳೂರಿನ ವಿಯಾನಿ ಅಂಥೋನಿ ಡಿ'ಕುನ್ಹಾ (8.50 ಪಾಯಿಂಟ್) ಹಾಗೂ ವನೆಸಾ ಥೆರೆಸಾ ಡಿ'ಸೋಜಾ (8 ಅಂಕ) ಮಂಗಳವಾರ ಇಲ್ಲಿ ಕೊನೆಗೊಂಡ ಪಿಯು ಕಾಲೇಜು ವಿದ್ಯಾರ್ಥಿಗಳ ರಾಜ್ಯ ಚೆಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗದ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.

ಪದವಿಪೂರ್ವ ಶಿಕ್ಷಣ ಇಲಾಖೆ, ತಾಲ್ಲೂಕಿನ ಕೆರವಡಿ ದುರ್ಗಾದೇವಿ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಟೂರ್ನಿಯಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಹತ್ತು ಮಂದಿಯ ತಂಡವನ್ನು ಆಯ್ಕೆ ಮಾಡಲಾಯಿತು.

ಆಯ್ಕೆಯಾದವರು
ಬಾಲಕರ ವಿಭಾಗ: ವಿಯಾನಿ ಡಿ'ಕೋಸ್ತಾ (ಮಂಗಳೂರು- 8.50 ಪಾಯಿಂಟ್),  ಶಶಾಂಕ ಡಿ (ಬೆಳಗಾವಿ-7.50),  ದೇಶಿಕ್ ಕೆ.ಜೆ (ಮೈಸೂರು-7.50 ), ಕಾರ್ತಿಕ ಎಚ್.ಎಸ್ (ಬೆಂಗಳೂರು ಉತ್ತರ-7) ಹಾಗೂ ನೀರಜ್ ಎಸ್ ಪೈ (ಶಿವಮೊಗ್ಗ-7).

ADVERTISEMENT

ಬಾಲಕಿಯರ ವಿಭಾಗ:
ವನೆಸಾ ಡಿ'ಸೋಜಾ (ಮಂಗಳೂರು-8 ಪಾಯಿಂಟ್), ಮಹಿಮಾ ಹಂಡಿಗೆ (ಮಂಗಳೂರು-7.50), ಆಯೆಷಾ ಎಸ್.ಕೆ (ಬಳ್ಳಾರಿ-7.50), ಸೀಮಾ ಕ್ರಾಸ್ತ ( ಮಂಗಳೂರು- 7.50) ಹಾಗೂ ಚ್ರಿಸೆಲ್ ಪಾಯಸ್ (ಮಂಗಳೂರು- 7.50).

ಲಂಕಾ ನೆರವಿಗೆ ಸಮರವೀರ

ಕೊಲಂಬೊ (ಎಎಫ್‌ಪಿ): ತಿಲಾನ್ ಸಮರವೀರ (ಬ್ಯಾಟಿಂಗ್ 76) ಅವರ ತಾಳ್ಮೆಯ ಅರ್ಧಶತಕದ ನೆರವಿನಿಂದ ಶ್ರೀಲಂಕಾ ತಂಡ ನ್ಯೂಜಿಲೆಂಡ್ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಕುಸಿತದಿಂದ ಪಾರಾಗಿದೆ.

ಪಿ. ಸಾರಾ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಮಂಗಳವಾರದ ಆಟದ ಅಂತ್ಯಕ್ಕೆ ಆತಿಥೇಯ ತಂಡ ಆರು ವಿಕೆಟ್‌ಗೆ 225 ರನ್ ಗಳಿಸಿತ್ತು. ಇನಿಂಗ್ಸ್ ಹಿನ್ನಡೆ ತಪ್ಪಿಸಿಕೊಳ್ಳಲು ಲಂಕಾಕ್ಕೆ 187 ರನ್‌ಗಳ ಅಗತ್ಯವಿದೆ. ಸಂಕ್ಷಿಪ್ತ ಸ್ಕೋರ್: ನ್ಯೂಜಿಲೆಂಡ್: ಮೊದಲ ಇನಿಂಗ್ಸ್: 153 ಓವರ್‌ಗಳಲ್ಲಿ 412 ಶ್ರೀಲಂಕಾ: ಮೊದಲ ಇನಿಂಗ್ಸ್ 86.2 ಓವರ್‌ಗಳಲ್ಲಿ 6 ವಿಕೆಟ್‌ಗೆ 225 (ಏಂಜೆಲೊ ಮ್ಯಾಥ್ಯೂಸ್ 47, ತಿಲಾನ್ ಸಮರವೀರ ಬ್ಯಾಟಿಂಗ್ 76, ಸೂರಜ್ ರಂದೀವ್ ಬ್ಯಾಟಿಂಗ್ 34, ಟಿಮ್ ಸೌಥಿ 51ಕ್ಕೆ 4)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.