ADVERTISEMENT

ಜಂಟಿ ಕಾರ್ಯದರ್ಶಿಯಾಗಿ ಕರ್ನಾಟಕದ ಸುಂದರ್ ರಾಜು

​ಪ್ರಜಾವಾಣಿ ವಾರ್ತೆ
Published 16 ಜೂನ್ 2012, 19:30 IST
Last Updated 16 ಜೂನ್ 2012, 19:30 IST

ಬೆಂಗಳೂರು: ಪ್ರಧಾನ ಕಾರ್ಯದರ್ಶಿಯಾಗಿದ್ದ ಅನಿಲ್ ಖನ್ನಾ ಅವರು ಅಖಿಲ ಭಾರತ ಟೆನಿಸ್ ಸಂಸ್ಥೆಯ (ಎಐಟಿಎ) ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. 12 ವರ್ಷಗಳಿಂದ ಅಧ್ಯಕ್ಷರಾಗಿದ್ದ ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ಅವರು ಆ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದರು.

ಉದ್ಯಾನ ನಗರಿಯ ಏಟ್ರಿಯಾ ಹೋಟೆಲ್‌ನಲ್ಲಿ ಶನಿವಾರ ಬೆಳಿಗ್ಗೆ ನಡೆದ ಎಐಟಿಎ ವಾರ್ಷಿಕ ಮಹಾ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಸಿನ್ಹಾ ಹಾಗೂ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್‌ಎಲ್‌ಟಿಎ) ಅಧ್ಯಕ್ಷ ಎಸ್.ಎಂ.ಕೃಷ್ಣ ಅವರನ್ನು ಆಜೀವ ಅಧ್ಯಕ್ಷರನ್ನಾಗಿ ಮಾಡಲು ಸಭೆ ತೀರ್ಮಾನ ಕೈಗೊಂಡಿತು.

ಕೆಎಸ್‌ಎಲ್‌ಟಿಎ ಪ್ರಧಾನ ಕಾರ್ಯದರ್ಶಿ ಕೂಡ ಆಗಿರುವ ಸಿ.ಎಸ್.ಸುಂದರ್ ರಾಜು ಅವರನ್ನು ಎಐಟಿಎ ಜಂಟಿ ಕಾರ್ಯದರ್ಶಿಯನ್ನಾಗಿ ನೇಮಿಸಲಾಯಿತು. ಭರತ್ ಓಜಾ ಹಾಗೂ ರಕ್ತಿಮ್ ಸೈಕಿಯಾ ಅವರು  ಕ್ರಮವಾಗಿ ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿಯಾಗಿ ನಾಲ್ಕು ವರ್ಷಗಳ ಅವಧಿಗೆ ಆಯ್ಕೆಯಾದರು.

ಎಐಟಿಎ ನೂತನ ಪದಾಧಿಕಾರಿಗಳು ಇಂತಿದ್ದಾರೆ: ಅಧ್ಯಕ್ಷ: ಅನಿಲ್ ಖನ್ನಾ; ಕಾರ್ಯಕಾರಿ ಉಪಾಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ: ಭರತ್ ಓಜಾ; ಜಂಟಿ ಕಾರ್ಯದರ್ಶಿ: ಸಿ.ಎಸ್.ಸುಂದರ್ ರಾಜು; ಖಜಾಂಚಿ: ರಕ್ತಿಮ್ ಸೈಕಿಯಾ. ಉಪಾಧ್ಯಕ್ಷರು: ಚಿಂತನ್ ಪಾರಿಖ್, ದೀಪೇಂದ್ರ ಹೂಡಾ, ದಲ್ಬೀರ್ ಸಿಂಗ್, ಜವಾಹರ್ ಸಿರ್ಕಾರ್, ಕಾರ್ತಿ ಪಿ.ಚಿದಂಬರಂ, ಎಂ.ಎ.ಅಳಗಪ್ಪನ್, ನರೇಂದ್ರ ಕುಮಾರ್, ಪ್ರತ್ಯೂಷ್ ಸಿನ್ಹಾ, ಪ್ರವೀಣ್ ಮಹಾಜನ್ ಹಾಗೂ ರಂಜನ್ ಕಶ್ಯಪ್.

ಕಾರ್ಯಕಾರಿ ಸಮಿತಿ: ಹಿರೋನ್‌ಮಾಯ್ ಚಟರ್ಜಿ (ಪಶ್ಚಿಮ ಬಂಗಾಳ), ಎ.ಬಿ.ಪ್ರಸಾದ್ (ಬಿಹಾರ), ಅಸಿತ್ ತ್ರಿಪಾಠಿ (ಒರಿಸ್ಸಾ), ಟಿ.ಡಿ.ಫ್ರಾನ್ಸಿಸ್ (ಕೇರಳ), ಸಿ.ಬಿ.ಎನ್.ರೆಡ್ಡಿ (ತಮಿಳುನಾಡು), ಶರದ್ ಕನ್ನಾಮ್‌ವರ್ (ಮಹಾರಾಷ್ಟ್ರ), ಅನಿಲ್ ಧೂಪರ್ (ಮಧ್ಯಪ್ರದೇಶ), ಸುಮನ್ ಕಪೂರ್ (ಹರಿಯಾಣ), ಸಿ.ಪಿ.ಕಾಕರ್ (ಉತ್ತರಪ್ರದೇಶ), ವಿ.ಕೆ.ಬಾತ್ರಾ (ದೆಹಲಿ) ಹಾಗೂ ಅಶೋಕ್ ಕುಮಾರ್ (ಆಂಧ್ರಪ್ರದೇಶ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.