ADVERTISEMENT

ಜಾವಲಿನ್: ನೀರಜ್‌ ಚೋಪ್ರಾಗೆ ’ಚಿನ್ನ’

ಪಿಟಿಐ
Published 14 ಏಪ್ರಿಲ್ 2018, 9:35 IST
Last Updated 14 ಏಪ್ರಿಲ್ 2018, 9:35 IST
ಜಾವಲಿನ್: ನೀರಜ್‌ ಚೋಪ್ರಾಗೆ ’ಚಿನ್ನ’
ಜಾವಲಿನ್: ನೀರಜ್‌ ಚೋಪ್ರಾಗೆ ’ಚಿನ್ನ’   

ಗೋಲ್ಡ್‌ಕೋಸ್ಟ್: ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ನೀರಜ್ ಚೋಪ್ರಾ ಅವರು ಜಾವಲಿನ್ ಎಸೆತದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

ನೀರಜ್ ಚೋಪ್ರಾ (20) ಅವರು  86.47 ಮೀಟರ್ ದೂರ ಜಾವಲಿನ್ ಎಸೆತದಲ್ಲಿ ಚಾರಿತ್ರಿಕ ಸಾಧನೆ ಮಾಡಿದ್ದು, ಈ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ ಮೊದಲ ಭಾರತೀಯರಾಗಿದ್ದಾರೆ.

ಶುಕ್ರವಾರ ನಡೆದ ಮೊದಲ ಸುತ್ತಿನಲ್ಲಿ ಭರವಸೆ ಮೂಡಿಸಿದ್ದ ಈ ಕಿರಿಯ ಅಂತರರಾಷ್ಟ್ರೀಯ ಚಾಂಪಿಯನ್ ಚೋಪ್ರಾ ಅವರು ಈ ದಿನವೂ ತಮ್ಮ ಸಾಮರ್ಥ್ಯ ಕಾಯ್ದುಕೊಂಡು ಅಥ್ಲೆಟಿಕ್ಸ್ ವಿಭಾಗದಲ್ಲಿ ಮೊದಲ ಚಿನ್ನ ತಂದು ಕೊಟ್ಟಿದ್ದಾರೆ.

ADVERTISEMENT

‘ಇದು ನನ್ನ ಬದುಕಿನ ಮುಖ್ಯವಾದ ಪದಕ. ನಾನು ವೈಯಕ್ತಿಕವಾಗಿ ಸಾಧನೆ ಮಾಡಲು ಪ್ರಯತ್ನಿಸಿದೆ. ಆದರೆ ಕೆಲವು ಸೆಂಟಿಮೀಟರ್ ಅಂತರದಲ್ಲಿ ತಪ್ಪಿತು. ಕೊನೆಯ ಎರಡು ಹಂತಗಳಲ್ಲಿ ಪ್ರಯತ್ನಿಸಿದರೂ ಸಾಧ್ಯವಾಗದಿರುವ ಬಗ್ಗೆ ಹತಾಶೆ ಇದೆ. ಆದರೂ ಈ ಸಾಧನೆಯಿಂದ ನನಗೆ ಬಹಳ ಸಂತಸವಾಗಿದೆ. ವೈಯಕ್ತಿಕವಾಗಿ ಉತ್ತಮ ಸಾಧನೆ ತೋರಲು ಈ ವರ್ಷ ನನಗೆ ಸಾಕಷ್ಟು ಅವಕಾಶಗಳಿವೆ’ ಎಂದು ಹೇಳಿದ್ದಾರೆ.

ನೀರಜ್ ಅವರು ಕಳೆದ ತಿಂಗಳು ನಡೆದಿದ್ದ ಫೆಡರೇಷನ್ ಕಪ್ ನ್ಯಾಷನಲ್ ಚಾಂಪಿಯನ್‌ಶಿಪ್ಸ್ ನಲ್ಲಿ 85.4 ಮೀಟರ್ ಜಾವಲಿನ್ ಎಸೆತದ ಮೂಲಕ ಚಿನ್ನ ಜಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.