ADVERTISEMENT

ಜಿಮ್ನಾಸ್ಟಿಕ್: ಹಾಸನಕ್ಕೆ ಸಮಗ್ರ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 19:30 IST
Last Updated 19 ಅಕ್ಟೋಬರ್ 2011, 19:30 IST

ತುಮಕೂರು: ಹಾಸನ ತಂಡದವರು ನಗರದಲ್ಲಿ ಕಳೆದ ಎರಡು ದಿನದಿಂದ ನಡೆದ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜು ಮಟ್ಟದ ಜಿಮ್ನಾಸ್ಟಿಕ್ ಸ್ಪರ್ಧೆಯ ಬಾಲಕ, ಬಾಲಕಿಯರ ವಿಭಾಗದ ಸಮಗ್ರ ಪ್ರಶಸ್ತಿ ಗೆದ್ದುಕೊಂಡರು
ಬಾಲಕರ ವಿಭಾಗದಲ್ಲಿ ಧಾರವಾಡದ ಅಂಜುಮನ್ ಪದವಿ ಪೂರ್ವ ಕಾಲೇಜಿನ ವಿಶ್ವನಾಥ್ ಜಾನಕಿ ಪಾಟೀಲ್ ಪಣಕ್ಕಿಟ್ಟಿದ್ದ ಆರೂ ಚಿನ್ನಗಳನ್ನು ಗೆದ್ದು, ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದರು. ಬೆಂಗಳೂರು ಎನ್‌ಎಂಕೆಆರ್‌ವಿ ಕಾಲೇಜಿನ ಎಂ.ಕಾವ್ಯಾ ಎರಡು ಚಿನ್ನ, ಒಂದು ಬೆಳ್ಳಿಯೊಂದಿಗೆ ವೈಯಕ್ತಿಕ ಚಾಂಪಿಯನ್ ಪಡೆದುಕೊಂಡರು.

ಫಲಿತಾಂಶ:
ಬಾಲಕರು- ಪ್ಯಾರಲಲ್ ಬಾರ್ಸ್‌:

ಧಾರವಾಡದ ವಿಶ್ವನಾಥ ಜಾನಕಿ ಪಾಟೀಲ್-1, ಉತ್ತರ ಕನ್ನಡ ಜಿಲ್ಲೆಯ ವಿನಾಯಕ ಚವ್ಹಾಣ್-2, ಹಾಸನದ ಎಂ.ಆರ್.ವರುಣ್ -3.

ಫೋಮೆಲ್ ಹಾರ್ಸ್‌: ಧಾರವಾಡದ ವಿಶ್ವನಾಥ ಜಾನಕಿ ಪಾಟೀಲ್ -1, ಉತ್ತರ ಕನ್ನಡ ಜಿಲ್ಲೆಯ ವಿನಾಯಕ ಚವ್ಹಾಣ್ -2, ತುಮಕೂರಿನ ಬಿ.ಎಂ.ಜೀವನ್-3

ADVERTISEMENT

ರಿಂಗ್ಸ್: ಧಾರವಾಡದ ವಿಶ್ವನಾಥ ಜಾನಕಿ ಪಾಟೀಲ್ -1, ಹಾಸನದ ಎಂ.ಆರ್.ವರುಣ್ -2, ಉತ್ತರ ಕನ್ನಡ ಜಿಲ್ಲೆಯ ವಿನಾಯಕ ಚವ್ಹಾಣ್ -3.

ಬಾಲಕಿಯರು: ಬ್ಯಾಲೆನ್ಸಿಂಗ್ ಭೀಮ್: ಬೆಂಗಳೂರಿನ ಎಸ್.ಸ್ಮಿತಾ -1, ಬೆಳಗಾವಿಯ ಸೌಮ್ಯಾ ವಾಗೋಜಿ -2, ಬೆಂಗಳೂರಿನ ಎಂ.ಕಾವ್ಯಾ ಹಾಗೂ ತುಮಕೂರಿನ ಜೆ.ಜ್ಯೋತಿ -3.

ಅನ್ ಈವನ್ ಬಾರ್ಸ್‌: ಬೆಂಗಳೂರಿನ ಎಂ.ಕಾವ್ಯಾ -1, ಬೆಂಗಳೂರಿನ ಎಸ್.ಸ್ಮಿತಾ -2, ಧಾರವಾಡದ ಪೂಜಾ ಸಾವಂತ್ ಮತ್ತು ತುಮಕೂರಿನ ಸುಕೃತಾ -3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.